‘ರಾಜ್ಯ ಸರ್ಕಾರ ಇದೆಯೋ ಇಲ್ವೊ ಎನ್ನುವ ಭಾವನೆ ಜನರಲ್ಲಿದೆ’ ಬಸವರಾಜ ಹೊರಟ್ಟಿ

ಸರ್ಕಾರದಲ್ಲಿ ಅನನುಭವಿಗಳೆ ಜಾಸ್ತಿ ಇದ್ದಾರೆ, ಅನುಭವಿಗಳೇ ಇಲ್ಲ. ಇದ್ದವರು ಎಲ್ಲರೂ ಹೊಟ್ಟೆ ತುಂಬಿದವರು ಇದ್ದಾರೆ. ಮಂತ್ರಿಗಳಾಗಿ ಕೆಲಸ ಮಾಡಬೇಕು ಕಾನೂನು ಪ್ರಕಾರ ಮಾಡಿದ್ರೆ ಬೇಕಾದ್ದು ಆಗುತ್ತೆ. ಆದರೆ ಅವರಿಗೆ ಇಚ್ಛಾಸಕ್ತಿ ಕೊರತೆ ಇದೆ,ಅಸಮಾಧಾನಗಳು ಹೆಚ್ಚಿದೆ. ಈ ಹಿನ್ನೆಲೆ ಸಿಎಂ ಬಿಟ್ರೇ ಬೇರೆ ಯಾವ ಮಂತ್ರಿಯೂ ಕೆಲಸ ಮಾಡ್ತಿಲ್ಲ. ಪ್ರವಾಹ ಪರಿಸ್ಥಿತಿಯಲ್ಲಿ ಮಂತ್ರಿಗಳು ಹಗಲು ರಾತ್ರಿ ಕೆಲಸ ಮಾಡಬೇಕಿತ್ತು. ಆದರೆ ಕೇವಲ ಪ್ರವಾಹ ನೋಡಿ ಬರುವುದು ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಇದೆಯೋ ಇಲ್ವೊ ಎನ್ನುವ ಭಾವನೆ ಜನರಲ್ಲಿದೆ. ವಿಧಾನಸಭೆಯಲ್ಲಿ ಯಾರೊಬ್ಬರೂ ಇರುವುದಿಲ್ಲ. ಅಲ್ಲಿಯೂ ಇಲ್ಲ ಜನರ ಬಳಿಯೂ ಇಲ್ಲ ಎಲ್ಲಿಗೆ ಹೋಗಿದ್ದಾರೆ ಎಂಬುದು ಗೋತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆ ಎಂಬ ಭಾವನೆ‌ ಜನರಲ್ಲಿ ಕಡಿಮೆ ಆಗಿದೆ ಎಂದು ಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಗುಡುಗಿದ್ದಾರೆ.

ಜಿ.ಟಿ. ದೇವೇಗೌಡ ಬಿಜೆಪಿ ಪತ ಹೇಳಿಕೆ ವಿಚಾರವಾಗಿ ಮಾತನಾಡಿದ ಹೊರಟ್ಟಿಯವರು, ಅಂಗೈ ಹುನ್ನಿಗೆ ಕನ್ನಡಿ ಯಾಕೆ ಬೇಕು? ಅವರು ಇಲ್ಲಿ ಇರುವುದಿಲ್ಲ ಎನ್ನುವುದು ಅವರ ಮಾತನಲ್ಲೇ ಗೊತ್ತಾಗುತ್ತೆ. ಅವರಿಗೆ ಮೊದಲೇ ಅಸಮಾಧಾಮ ಇತ್ತು. ಉಸಿರುಗಟ್ಟುವ ವಾತಾವಾರಣ ಇದೆ ಅಂದಿದ್ರು ಅದು ನನಗೂ ಸರಿ ಅನಿಸಿತ್ತು. ಹೀಗಾಗಿ ಅವರು ಈ ಪಕ್ಷದಲ್ಲಿ ಇರುವುದಿಲ್ಲ ಎಲ್ಲಿ ಹೋಗ್ತಾರೋ ಗೊತ್ತಿಲ್ಲ. ಸರ್ಕಾರ ಇದ್ದಾಗ ನಮ್ಮನ್ನೆಲ್ಲ ಸರಿಯಾಗಿ ನೋಡಿಲ್ಲ ಅಂತ ಬಹಳ ಜನ ಶಾಸಕರು ನೋವು ವ್ಯಕ್ತಪಡಿಸಿದ್ದಾರೆ. ನನಗೂ ಸಾಕಷ್ಟು ನೋವಾಗಿದ್ದರೂ ಕೂಡ ನಾನು ಹೇಳಿಕೊಂಡಿಲ್ಲ. ನಾನು ಒಂದು ಶಿಸ್ತಿನಲ್ಲಿ ಇರುವ ಕಾರಣ ಹೇಳಿಕೊಂಡಿಲ್ಲ. ನನ್ನ ಬಳಿಯೂ ಅನೇಕರು ಮಾತನಾಡಿದ್ದಾರೆ.

ಆವಾಗಿನ ಅತೃಪ್ತಿ ಈಗ ಸ್ಪೋಟಗೊಳ್ಳುತ್ತಿದೆ. ಪಕ್ಷದ ವರಿಷ್ಠರ ಈ ಬಗ್ಗೆ ಅಂಥವರನ್ನೆಲ್ಲ ಕರೆದು ಮಾತನಾಡುವುದು ಅವರ ಧರ್ಮ. ಈಗ ಒಬ್ಬೊಬ್ಬರು ಹೇಳಿಕೊಳ್ಳುತ್ತ ಹೋದರೆ ಪಕ್ಷದ ಭವಿಷ್ಯ ಕಷ್ಟವಾಗುತ್ತದೆ.ಈಗಿನ ಬೆಳವಣಿಗೆ ನೋಡಿದರೆ ಅಪರೇಷನ್ ಕಮಲ ನಡೆಯುತ್ತೇ ಅನಿಸುತ್ತದೆ ಎಂದರು.

ಡಿಕೆಶಿ ಬಂಧನ ವಿಚಾರವಾಗಿ ಮಾತನಾಡಿ ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಅದು ಕಾನೂನು ಕೆಲಸ. ಆದರೆ ಅವರು ಎಂದಿಗೂ ವಿಚಾರಣೆ ತಪ್ಪಿಸಿಲ್ಲ ಕರೆದಾಗೆಲ್ಲ ಹೋಗಿದ್ದಾರೆ. ಹೀಗಾಗಿ ಅವರನ್ನು ಅರೆಸ್ಟ್ ಮಾಡುವ ಅಗತ್ಯ ಇರಲಿಲ್ಲ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights