‘ರಾಜ್ಯ ಸರಕಾರ ಪ್ರವಾಹಪೀಡಿತ ಪ್ರತಿ ಮನೆಗೆ ತಲಾ ರೂ.10 ಸಾವಿರ ಪರಿಹಾರ ತಲುಪಿಸಿದೆ’ ಕೆ. ಎಸ್. ಈಶ್ವರಪ್ಪ

ರಾಜ್ಯದ ಇತಿಹಾಸದಲ್ಲಿ ಇಂಥ ಜಲಪ್ರಳಯ ನೋಡಿರಲಿಲ್ಲ . ಜನ, ಜಾನುಚಾರು, ಆಸ್ತಿ-ಪಾಸ್ತಿ ನಷ್ಟ ಮಾಡಿದೆ. ಪ್ರವಾಹ ಸಂತ್ರಸ್ತರಿಗೆ ಸಮಾಧಾನ, ಸಂತೃಪ್ತಿಯಾಗಲು ತಾತ್ಜಾಲಿಕ, ಶಾಶ್ವತ ಪರಿಹಾರ ಆಗಬೇಕಿದೆ ಎಂದು ವಿಜಯಪುರದಲ್ಲಿ ಸಚಿವ ಕೆ. ಎಸ್. ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರವಾಹಪೀಡಿತ ಪ್ರದೇಶಗಳನ್ನುದ್ದೇಶಿಸಿ ಮಾತನಾಡಿದ ಅವರು,  ನೆರೆ ಸಂತ್ರಸ್ತರು ರಾಜ್ಯ, ಕೇಂದ್ರಗಳ ಹೊಣೆಯಾಗಿದ್ದಾರೆ.  ಸರಕಾರಿ ಅಧಿಕಾರಿಗಳು ನಿರೀಕ್ಷೆ ಮೀರಿ ಹಗಲು-ರಾತ್ರಿ ಕೆಲಸ ಮಾಡಿದ್ದಾರೆ.ನಾನಾ ಸಂಘ-ಸಂಸ್ಥೆಗಳು ಶಕ್ತಿ ಮೀರಿ ಪರಿಹಾರದಲ್ಲಿ ತೊಡಗಿವೆ. ರಾಜ್ಯ ಸರಕಾರ ಪ್ರತಿ ಮನೆಗೆ ತಲಾ ರೂ.10 ಸಾವಿರ ಪರಿಹಾರ ತಲುಪಿಸಿದೆ. ಪರಿಹಾರ ತಲುಪದವರಿಗೂ ಅವರ ಬ್ಯಾಂಕ್ ಅಕೌಂಟಿಗೆ ಹಣ ಜಮಾ ಮಾಡಲಾಗುತ್ತಿದೆ ಎಂದಿದ್ದಾರೆ.

ಸಚಿವರಾದ ಬಳಿಕ ಎಲ್ಲ ಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಹದಲ್ಲಿ ಮನೆಗಳು ಭಾಗಶಃ ಹಾನಿಯಾಗಿದ್ದರೂ ಅಂಥವರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಲಾಗುವುದು. ಬಿಜೆಪಿ ಸರಕಾರ ಸಮರೋಪಾದಿಯಲ್ಲಿ ಸ್ಪಂದಿಸುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವರ ಭೇಟಿಯಿಂದ ಸರಕಾರಿ ಅಧಿಕಾರಿಗಳೂ ಸ್ಪಂದಿಸುತ್ತಿದ್ದಾರೆ.

     

ಜೊತೆಗೆ ಕೇಂದ್ರ ಪ್ರವಾಹಕ್ಕೆ ಸಂಬಂಧಿಸಿದಂತೆ ರೂ.128 ಕೋಟಿ ಹಣ ಬಿಡುಗಡೆ ಮಾಡಿದೆ. ನಿನ್ನೆ ಬರ ಪರಿಹಾರಕ್ಕಾಗಿ ರೂ.1028 ಕೋಟಿ ಬಿಡುಗಡೆ ಮಾಡಿದೆ.

ಇನ್ನೂ ರಾಜ್ಯದ ಪ್ರವಾಹದ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಅನುದಾನ ಕರ್ನಾಟಕಕ್ಕೆ ಸಿಗುವ ವಿಶ್ವಾಸವಿದೆ.  ಪ್ರವಾಹ ಪರಿಹಾರ ಕಾರ್ಯದ ಬಗ್ಗೆ ಕಾಂಗ್ರೆಸ್ ನಾಯಕರೇ ಶ್ಲಾಘಿಸಿದ್ದಾರೆ.

ಆದರೆ, ಕೆಲವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಾವು ರಾಜಕಾರಣಿಗಳು ಮತಕ್ಕಾಗಿಯಾದರೂ G+2 ಮನೆ ನಿರ್ಮಿಸಲು ಜನರ ಮನವೊಲಿಸಬೇಕಿದೆ. ಆದರೆ, ಸಂತ್ರಸ್ತರು ವೈಯಕ್ತಿಕವಾಗಿ ಪ್ರತ್ಯೇಕ ಮನೆ ಕೇಳುತ್ತಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ 10 ದಿನಗಳಲ್ಲಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಶೇ.90 ರಷ್ಟು ಸಮೀಕ್ಷೆ ಮುಗಿದಿದೆ. ಸಿಎಂ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿ ಪರಿಹಾರ ಕೇಳಿದ್ದಾರೆ.

ಪ್ರವಾಹ ಹಾನಿಯ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ರಾಜ್ಯಕ್ಕೆ ಪ್ರವಾಹದ ಹಾನಿ ಅಧ್ಯಯನಕ್ಕೆ ಕೇಂದ್ರದಿಂದ ತಂಡ ಕಳುಹಿಸುವುದಾಗಿ ಪ್ರಧಾನಿ ಸಿಎಂಗೆ ತಿಳಿಸಿದ್ದಾರೆ. ರಾಜ್ಯ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ.

ಅನರ್ಹ ಶಾಸಕರು ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರಿಗೂ ನಾವು ನ್ಯಾಯ ಕೊಡುತ್ತೇವೆ. ಮಾಜಿ ಸ್ಪೀಕರ ರಮೇಶಕುಮಾರ ಕಾಂಗ್ರೆಸ್ ಏಜೆಂಟರಂತೆ ವರ್ತಿಸಿ ಈಗ ಗೊಂದಲ ಸೃಷ್ಠಿಸಿದ್ದಾರೆ.

ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳೀನಕುನಾರ ನೇಮಕ ವಿಚಾರದ ಬಗ್ಗೆ ಈಶ್ವರಪ್ಪ ಪ್ರಸ್ತಾಪಿಸಿದರು. ಅಮಿತ ಶಾ ಕೂಡ ಈ ಹಿಂದೆ ಹೆಚ್ಚು ಹೆಚ್ಚು ಜನರಿಗೆ ಪರಿಚಯವಿರಲಿಲ್ಲ.  ಕಟೀಲ ಕೂಡ ಇನ್ನು ಮುಂದೆ ಒಳ್ಳೆಯ ಕೆಲಸದ ಮೂಲಕ ರಾಜ್ಯದ ಗಮನ ಸೆಳೆಯಲಿದ್ದಾರೆ ಎಂದು ವಿಜಯಪುರದಲ್ಲಿ ನೂತನ ಸಚಿವ ಕೆ. ಎಸ್. ಈಶ್ವರಪ್ಪ ನೆರೆ ಸಂತ್ರಸ್ತರಿಗೆ ಭರವಸೆ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.