ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಗರಂ..!

b

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆರಂಭಚವಾಗಿದೆ.  ಈ ಸಭೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ,  ಅನಂತಕುಮಾರ,  ಡಿವಿಎಸ್,  ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್, ಜಗದೀಶ್ ಶೆಟ್ಟರ್, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್,  ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್,  ಶೋಭಾ ಕರಂದ್ಲಾಜೆ,  ಅರವಿಂದ್ ಲಿಂಬಾವಳಿ,  ಗೋವಿಂದ ಕಾರಜೋಳ,  ಅಶೋಕ್ ವೇದಿಕೆಯಲ್ಲಿ ಉಪಸ್ಥಿತಿ.

ಆದರೆ ಕೆ.ಎಸ್. ಈಶ್ವರಪ್ಪ,  ಪ್ರಲ್ಹಾದ್ ಜೋಶಿ ಹಾಗು ನೂತನ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಕಾರ್ಯಕಾರಿಣಿ ಸಭೆಗೆ ಗೈರು ಎದ್ದು ಕಾಣುತ್ತಿದೆ. ಈ ಸಂದರ್ಭದಲ್ಲಿ  ಅಗಲಿದ ಗಣ್ಯರಿಗೆ ಹಾಗು ಇತ್ತೀಚೆಗೆ ಹತ್ಯೆಯಾದ ಜಿ.ಪಂ ಸದಸ್ಯ ಯೋಗೇಶ ಗೌಡ ರಿಗೂ ಕಾರ್ಯಕಾರಿಣಿಯಲ್ಲಿ ಸಂತಾಪ ಸೂಚಿಸಲಾಯಿತು

ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಉದ್ಘಾಟನಾ ಭಾಷಣ…
”150 ಸ್ಥಾನ ಗೆಲ್ಲುವ ಸಂಕಲ್ಪ ಮಾಡಬೇಕಾಗಿದೆ. ಕಾಂಗ್ರೆಸ್ ಕಿತ್ತೊಗೆಯಲು 2 ವರ್ಷದ ಕಾಲಾವಕಾಶವನ್ನು ಕಾರ್ಯಕರ್ತರು ನೀಡಬೇಕಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿಯ ಹಾಗೂ ಸಂಘಪರಿವಾರದ ಕಾರ್ಯಕರ್ತರ ಹತ್ಯೆಯಾಗ್ತಿದೆ. ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಸರ್ಕಾರ ತೊಡಗಿದೆ.. ಅಹಿಂದ ವರ್ಗಕ್ಕೆ ಕೊಟ್ಟಿರುವ ಅನುದಾನ ಹಾಗೂ ಯೋಜನೆಯ ಬಗ್ಗೆ ರಾಜ್ಯದ ಜನತೆಯ ಮುಂದೆ ವಿವರ ಇಡಬೇಕು…”

b4

ಸಿಎಂ ಗೆ ಯಡಿಯೂರಪ್ಪ ಸವಾಲು..
”ಅವರ ಯೋಗ್ಯತೆಗೆ ಇದುವರೆಗೆ ಒಬ್ಬ ಲೋಕಾಯುಕ್ತರ ನೇಮಕ ಮಾಡಲಾಗಿಲ್ಲ.. ಎಸಿಬಿ ರಚನೆ ಮಾಡಿದ್ದಕ್ಕೆ ಹೈ ಕೋರ್ಟು ಛೀಮಾರಿ ಹಾಕಿದೆ.. ರಾಜ್ಯ ಸರ್ಕಾರದ ಬಣ್ಣ ಬಯಲಾಗುತ್ತಿದೆ…”

⁠⁠⁠ಕಾರ್ಯಕಾರಿಣಿಯಲ್ಲಿ  ಸದಾನಂದಗೌಡ ಹೇಳಿಕೆ…
”ಪಕ್ಷದೊಳಗೆ ಭಿನ್ನಾಭಿಪ್ರಾಯ ಸಹಜ. ಆದರೆ ಗೊಣಗಾಟ ಹೆಚ್ಚಾದ್ರೆ ಪಕ್ಷಕ್ಕೂ ಒಳ್ಳೆಯದಲ್ಲ. ಇದರಿಂದ ಗೊಣಗುವವರಿಗೂ ತೊಂದರೆ. ಈಗ ರಾಜ್ಯದ ಪರಿಸ್ಥಿತಿ ಬಿಜೆಪಿ ಪರವಾಗಿದೆ.. ಈಗ ನಾವು ಹೋರಾಟ ತೀವ್ರಗೊಳಿಸಬೇಕು. ಮೊದಲು ನಾಯಕರಾದವರು ಬೀದಿಗಿಳಿದ್ರೆ,ಲಕ್ಷಾಂತರ ಕಾರ್ಯಕರ್ತರು ಹಿಂಬಾಲಿಸುತ್ತಾರೆ.
ಸಂಘಟಿತರಾಗಿ ಹೋರಾಟ ಆರಂಭಿಸಿ. 2018 ರಲ್ಲಿ ಸಿಎಂ ಸಿದ್ಧರಾಮಯ್ಯ ಅವರನ್ನು ಮೈಸೂರಿಗೆ ಕಳುಹಿಸುವ ತನಕ ಹೋರಾಟ ಮಾಡೋಣ.. ಹೋರಾಟ ಆದ್ಯತಾ ವಲಯ ಆಗಬೇಕು. ಹೋರಾಟ ಮರೆತರೆ ನಮಗೆ ಒಳ್ಳೆಯದು ಆಗಲ್ಲ.. ನಾಯಕರು ಹೋರಾಟದ ರಣಾಂಗಣಕ್ಕೆ ಇಳಿಯಬೇಕು….
ಪಕ್ಷದಲ್ಲಿ ಭಿನ್ನಾಭಿಪ್ರಾಯ ಆಗಬಾರದು..ಒಗ್ಗಟ್ಟು ನಮ್ಮ ಆದ್ಯತೆಯಾಗಬೇಕು.. ಅಸಮಾಧಾನ, ಮುನಿಸು ಹೊರತುಪಡಿಸುವ ಕಾರ್ಯಕಾರಿಣಿಯ ಆದ್ಯತೆ ಆಗಲಿ.
ಪಕ್ಷಕ್ಕೆ ಇತರ ನಾಯಕರನ್ನು ಕರೆತರುವಾಗ ಎಚ್ಚರಿಕೆ ಇರಲಿ ಅಂತ ಪರೋಕ್ಷ  ಸಲಹೆ ನೀಡಿದ ಸದಾನಂದಗೌಡ. ಕೊಳಕು ನೀರು ಬರದಂತೆ ತಡೆಯಲು ನಮ್ಮಲ್ಲಿ ಪರಿವಾರ ಸಂಘಟನೆ ಇದೆ.. ಪಕ್ಷದಲ್ಲಿ ಸಮನ್ವಯತೆ ಹಾಗೂ ಸಂಘಟನೆಯೇ ಆದ್ಯತೆ ಆಗಬೇಕು..”

Comments are closed.