ರಾಜಕೀಯ ವ್ಯಕ್ತಿ, ಪಕ್ಷಗಳಿಗೆ ಶಾಕ್ ನ್ಯೂಸ್ : ಟ್ವಿಟ್ಟರ್ ನಲ್ಲಿ ರಾಜಕೀಯ ಜಾಹೀರಾತುಗಳು ನಿಷೇಧ

ಭಾರತ ಮಾತ್ರವಲ್ಲದೆ  ಜಗತ್ತಿನೆಲ್ಲಡೆ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಟ್ವಿಟ್ಟರ್ ಖಾತೆ ಹೊಂದಿರುವುದು ಸಾಮಾನ್ಯ ಮತ್ತು ರಾಜಕೀಯ ಸಂಬಂಧಿ ವಿಚಾರಗಳ ಪ್ರಚಾರ ಮತ್ತು ಬ್ಲಾಗ್ ಗಳು ಕೂಡ ಸಾಮಾನ್ಯ ಇದನ್ನು ಕೆಲವು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಟ್ವಿಟ್ಟರ್ ರಾಜಕೀಯ ವ್ಯಕ್ತಿ ಹಾಗು ಪಕ್ಷಗಳಿಗೆ ದೊಡ್ಡ ಶಾಕ್ ನೀಡಿದೆ.

ಸೋಷಿಯಲ್ ಮೀಡಿಯಾ ಎಲ್ಲಾ ರೀತಿಯ ರಾಜಕೀಯ ಜಾಹೀರಾತುಗಳಿಗೆ ಅಧಿಕೃತವಾಗಿ ಟ್ವಿಟ್ಟರ್ ನಿಷೇಧ ಹೇರಿದೆ. ಅಭ್ಯರ್ಥಿಗಳು, ಪಕ್ಷಗಳು, ಸರ್ಕಾರಗಳು ಅಥವಾ ಅಧಿಕಾರಿಗಳು, ಸಾರ್ವಜನಿಕ ಖಾತೆ ಸಮಿತಿಗಳು(ಪಿಎಸಿ) ಮತ್ತು ಕೆಲವು ರಾಜಕೀಯ ಲಾಭರಹಿತ ಸಂಸ್ಥೆಗಳು ರಾಜಕೀಯ ವಿಷಯಗಳನ್ನು ಇನ್ನು ಮುಂದೆ ಟ್ವಿಟ್ಟರ್ ನಲ್ಲಿ ಹಾಕಿ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದೆ.ಜಾಗತಿಕ ಮಟ್ಟದಲ್ಲಿ ಟ್ವಿಟ್ಟರ್ ರಾಜಕೀಯ ವಿಷಯಗಳಿಗೆ ನಿಷೇಧ ಹೇರಿದೆ.

ರಾಜಕೀಯ ಜಾಹೀರಾತುಗಳೆಂದರೆ,ರಾಜಕೀಯ ವಿಷಯಗಳನ್ನು ಉಲ್ಲೇಖಿಸುವಂತವುಗಳು, ಮತದಾರರಲ್ಲಿ ಮನವಿ ಮಾಡಿಕೊಳ್ಳುವುದು, ಹಣಕಾಸು ನೆರವು ಕೇಳುವುದು, ಯಾವುದೇ ರೀತಿಯ ರಾಜಕೀಯ ವಿಷಯದ ಪರವಾಗಿ ಅಥವಾ ವಿರುದ್ಧವಾಗಿ ವಕಾಲತ್ತು ವಹಿಸುವುದನ್ನು ಈ ನೀತಿಯಡಿಯಲ್ಲಿ ನಿಷೇಧಿಸಲಾಗಿದೆ ಎಂದು ಟ್ವಿಟ್ಟರ್ ತನ್ನ ಻ಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.