ರಾಜಕೀಯ ದ್ವೇಷಕ್ಕೆ ಎರಡು ಕುಟುಂಬಗಳ ಮಾರಾಮಾರಿ : ತಂದೆ, ಮಗನ ಬರ್ಬರ ಹತ್ಯೆ

ರಾಜಕೀಯ ದ್ವೇಷ, ದೇವಸ್ಥಾನದ ಪೂಜಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಾರಾಮಾರಿ ನಡೆದು ಇಬ್ಬರ ಹತ್ಯೆ ನಡೆದಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಜಮ್ಮೀಹಾಳ ಗ್ರಾದಮದಲ್ಲಿ ತಂದೆ, ಮಗನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ತಂದೆ ವೀರಭದ್ರಪ್ಪ ಸತ್ತೂರ (48), ಮಗ ರವಿ ಸತ್ತೂರ (20) ಅವರನ್ನು  ಹದಿನೇಳು ಜನರ ತಂಡದಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದ್ದು ದೇಹಗಳು ಪತ್ತೆಯಾಗದಂತಾಗಿವೆ.

ವೀರಭದ್ರಪ್ಪ ಸತ್ತೂರ್ ಸ್ಥಳದಲ್ಲೇ ಸಾವನ್ನಪ್ಪಿದರೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ರವಿ ಸತ್ತೂರ ಸಾವನ್ನಪ್ಪಿದ್ದಾರೆ. ಚುಳಕಿ ಮತ್ತು ಅಕ್ಕಿ ಕುಟುಂಬದ ಹದಿನೇಳು‌ ಜನರ ವಿರುದ್ಧ  ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.