ರಂಗಕರ್ಮಿ ಪ್ರಸನ್ನರನ್ನು ಭೇಟಿ ಮಾಡಿದ ಎಚ್.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ

ಪವಿತ್ರ ಆರ್ಥಿಕತೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರಂಗಕರ್ಮಿ ಪ್ರಸನ್ನ ಅವರನ್ನು ಇಂದು ಭೇಟಿ ಮಾಡಿದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ ಅವರು ಉಪಸ್ಥಿತರಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಟ್ವೀಟ್‌ ಮಾಡಿದ್ದಾರೆ..

ಜನಸಾಮಾನ್ಯರಲ್ಲಿ ಮಾರಕ ಆರ್ಥಿಕತೆಯ ಕುರಿತು ಅರಿವು ಮೂಡಿಸುವ ಹಾಗೂ ಆಳುವ ವರ್ಗವನ್ನು ಎಚ್ಚರಿಸುವ ನಿಟ್ಟಿನಲ್ಲಿ ಹಿರಿಯ ರಂಗಕರ್ಮಿಗಳೂ ಹಾಗೂ ಗಾಂಧಿವಾದಿಗಳೂ ಆದ ಹೆಗ್ಗೋಡಿನ ಪ್ರಸನ್ನರವರು ಅಕ್ಟೋಬರ್ 2 ಗಾಂಧಿ ಜಯಂತಿಯ ದಿನದಿಂದ ಬೆಂಗಳೂರಿನ ವಲ್ಲಭ ನಿಕೇತನದಲ್ಲಿ ಪವಿತ್ರ ಆರ್ಥಿಕತೆಗಾಗಿ ಆಗ್ರಹಿಸಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಹಾಗೂ ಸತ್ಯಾಗ್ರಹವನ್ನು ತೀವ್ರಗೊಳಿಸಿದ ಪ್ರಸನ್ನರವರು ಅಕ್ಟೊಬರ್ 6 ರಿಂದ ಅಮರಣಾಂತ ಉಪವಾಸವನ್ನೂ ಆರಂಭಿಸಿದ್ದಾರೆ.

ಈ ಸತ್ಯಾಗ್ರಹಕ್ಕೆ ಬೆಂಬಲದ ಭಾಗವಾಗಿ ಇಂದು ಸಿದ್ದರಾಮಯ್ಯನವರು ಪ್ರಸನ್ನರವರನ್ನು ಭೇಟಿ ಮಾಡಲು ಬೆಂಗಳೂರಿನ ಗಾಂಧಿಭವನಕ್ಕೆ ತೆರಳಿದಾಗ ಅವರಿಗೆ ಅಚ್ಚರಿ ಕಾದಿತ್ತು. ಅಲ್ಲಿ ಅವರ ಒಂದು ಕಾಲದ ಗುರುಗಳು ಸದ್ಯಕ್ಕೆ ಮುನಿಸಿಕೊಂಡಿರುವ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮಾಜಿ ಪ್ರಧಾನಿಗಳು ಆದ ಎಚ್‌.ಡಿ ದೇವೇಗೌಡರು ಇದ್ದರು. ಅವರೊಂದಿಗೆ ಸಿದ್ದರಾಮಯ್ಯನವರು ಫೋಟೊ ಕೂಡ ತೆಗಿಸಿಕೊಂಡು ಟ್ವೀಟ್ ಮಾಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಹೀನಾಯ ಸೋಲು ಕಂಡ ಬಳಿಕ ಇಬ್ಬರ ನಡುವಿನ ಸಂಬಂಧ ಬಿರುಕು ಬಿಟ್ಟಿತ್ತು. ಒಂದು ತಿಂಗಳ ಹಿಂದೆಯಂತೂ ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಪರಸ್ಪರ ವಾಕ್ಸಮರದಲ್ಲಿ ನಿರತರಾಗಿದ್ದರು. ಆದರೆ ಇಂದು ಅನಿವಾರ್ಯವಾಗಿ ಒಂದೇ ಕಡೆ ಭೇಟಿಯಾಗಬೇಕಾದ ಸಂದರ್ಭ ಒದಗಿಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.