ಯೂಟ್ಯೂಬ್‌ ಟ್ರೆಂಡಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದ ಪೈಲ್ವಾನ..

ಚಿತ್ರವೊಂದು ಬಿಡುಗಡೆಗೂ ಮುನ್ನ ಸೃಷ್ಟಿಸುವ ಹವಾದ ಆಧಾರದ ಮೇಲೆ ಹೇಳುವುದಾದರೆ ಕಿಚ್ಚನ ಪೈಲ್ವಾನ್ ರಿಲೀಸ್‌ಗೆ ಮುನ್ನವೇ ಸೂಪರ್ ಹಿಟ್ ಆಗಿದೆ.

ಎರಡು ದಿನಗಳ ಹಿಂದೆ ಬಿಡುಗಡೆ ಮಾಡಲಾದ ಚಿತ್ರದ ಹಿಂದಿ ಟ್ರೇಲರ್‌ಗೆ ಇನ್ನಿಲ್ಲದ ಫ್ಯಾನ್ ಫಾಲೋಯಿಂಗ್ ಸೃಷ್ಟಿಯಾಗಿದೆ. ಎರಡೇ ದಿನದಲ್ಲಿ ಈ ಟ್ರೇಲರ್‌ ಅನ್ನು 58 ಲಕ್ಷ ಜನ ವೀಕ್ಷಿಸಿದ್ದು ಚಿತ್ರ ತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಯೂಟ್ಯೂಬ್ ಜಾಲತಾಣದ ಟ್ರೆಂಡಿಂಗ್ ಲಿಸ್ಟ್‌ನಲ್ಲಿ ಕಿಚ್ಚ ಪೈಲ್ವಾನ್ ಚಿತ್ರದ ಟ್ರೇಲರ್‍ ಮೂರನೇ ಸ್ಥಾನಕ್ಕೆ ಜಿಗಿದಿದ್ದು ೧.೨೭ ಲಕ್ಷ ಜನ ಇದನ್ನು ಇಷ್ಟಪಟ್ಟಿದ್ದಾರೆ.

ಟ್ರೇಲರ್‍ ಅನ್ನು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದ್ದು, ಕಿಚ್ಚ ಸುದೀಪ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಚಿತ್ರ ಸೆಪ್ಟೆಂಬರ್ 12ಕ್ಕೆ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಮೊದಲ ತುಣುಕು ನೋಡಿಯೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರ ಜೊತೆಗೆ ಹಿಂದಿ ನಟ ಸುನೀಲ್ ಶೆಟ್ಟಿ ಸಹ ನಟಿಸುತ್ತಿದ್ದು ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಕನ್ನಡ, ಮಲಯಾಳಂ ಹಾಗೂ ತಮಿಳಿನ ಟ್ರೈಲರ್​ ಅನ್ನು ಲಹರಿ ಬಿಡುಗಡೆ ಮಾಡಿದರೆ, ತೆಲುಗು ಟ್ರೈಲರ್​ ಅನ್ನು ವರಾಹಿ ಚಲನಚಿತ್ರ ಹಾಗೂ ಹಿಂದಿ ಟ್ರೈಲರ್​ ಅನ್ನು ಝೀ ಸ್ಟುಡಿಯೋಸ್​ ಬಿಡುಗಡೆ ಮಾಡಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.