ಯಾವ ವಯಸ್ಸಿನವರು ಯಾವ ಆಹಾರ ಸೇವಿಸಿದರೆ ಒಳ್ಳೆಯದು..? ಇಲ್ಲಿದೆ ನೋಡಿ ಮಾಹಿತಿ…

ಹದಿಹರಿಯದಲ್ಲಿ ಮಾಡಿದ ಕೆಲಸ ವಯಸ್ಸಾದಂತೆ ಮಾಡಲು ಸಾಧ್ಯ ಇಲ್ಲ. ಸರಿಯಾದ ಪೋಷಕಾಂಶಗಳು ಸಿಗದೇ ಹೋದಾಗ ದೇಹದಲ್ಲಿ ಕ್ರಿಯಾಶೀಲತೆ ಕುಂದುತ್ತಾ ಹೋಗುತ್ತದೆ. ಇದಕ್ಕೆ ನಾವು ಸೇವಿಸುವ ಆಹಾರದಿಂದ ಕೊಂಚಮಟ್ಟಿಗಿನ ಶಕ್ತಿ ಲಭಿಸಬಹುದು. ಆದರೆ ಒತ್ತಡದ ಜೀವನ ಶೈಲಿಯಲ್ಲಿ ನಾವು ನಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದೇ ಇಲ್ಲ. ಹೀಗಾಗಿ ಬಹುಬೇಗ ವಯಸ್ಸಾದಂತೆ ದೇಹದಲ್ಲಿನ ಶಕ್ತಿ ಕುಂದುತ್ತಾ ಹೋಗುತ್ತದೆ. ಇದಕ್ಕೆ ಪರಿಹಾರ ಆಯಾ ವಯಸ್ಸಿನಲ್ಲಿ ಕೆಲವೊಂದು ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು.

ಹಾಗಾದರೆ ಯಾವ ವಯಸ್ಸಿನಲ್ಲಿ ಯಾವೆಲ್ಲಾ ಆಹಾರ ಸೇವಿಸಿದರೆ ದೇಹಕ್ಕೆ ಒಳ್ಳೆದು..? ಅನ್ನೋದನ್ನ ತಿಳಿಸುವಂತ ಪ್ರಯತ್ನ ನಾವು ಮಾಡಿದ್ದೇವೆ.

20-30 ರೊಳಗಿನ ವಯಸ್ಸಿನವರು ಕೆಳಗಿನ ಆಹಾರ ಪದ್ಧತಿಯನ್ನು ಅನುಸರಿಸಿ :-

20ರ ಹರಿಯದಲ್ಲಿ ಪ್ರೋಟೀನ್ ಇರುವ ಆಹಾರ ಸ್ನಾಯುಗಳ ಬೆಳವಣಿಗೆಗೆ ಅತ್ಯಗತ್ಯ, ಕೋಳಿ ಮಾಂಸ ಇತರೆ ನಾನ್ ವೆಜ್ ಆಹಾರಗಳನ್ನ ಸೇವಿಸಬಹುದು.

ನಟ್ಸ್ ಮತ್ತು ಧಾನ್ಯಗಳು ಸೇವನೆ ಒಳ್ಳೆಯದು. ಇದರಿಂದ ಸಂದಿ ವಾತವನ್ನು ತಡೆಯಬಹುದು. ವಿಟಮಿನ್ ಹೆಚ್ಚಿರುವ ಧಾನ್ಯಗಳು ಸೇವಿಸುವುದರಿಂದ ಆರೋಗ್ಯ ತುಂಬಾನೇ ಒಳ್ಳೆಯದು. ಕ್ಯಾಲ್ಸಿಯಂ ಇತಂಹ ಆಹಾರಗಳು ಆರೋಗ್ಯವನ್ನು ಕಾಪಾಡುತ್ತವೆ.

ಹಾರ್ಮೋನ್ ಸಮತೋಲನ ಇರುವ ಆಹಾರಗಳು ಸೇವನೆ – ಮೊಸರು, ವೋಟ್ಸ್ ಸೇವಿಸುವುದರಿಂದ ದೇಹದಲ್ಲಿ ನೀರಿನಂಶ ಹೆಚ್ಚಾಗುತ್ತದೆ.

30ರ ನಂತರ :-

30ರ ನಂತರ ಮೊಟ್ಟೆಯ, ತರಕಾರಿ ಸೇವಿಸಲೇಬೇಕಾದ ಆಹಾರ. ಕುಟುಂಬ ಒತ್ತಡ ದಿಂದ ಮೆದುಳಿನ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಆಹಾರದಲ್ಲಿ ತೆಂಗಿನ ಎಣ್ಣೆ ಬಳಸಿದರೆ ಒಳ್ಳೆಯದು. ಜೊತೆಗೆ ಮೊಟ್ಟೆ ಸೇವನೆ ಇರಲಿ.

ಇನ್ನೂ ವಯಸ್ಸಾದಂತೆ ಬಿಳಿ-ಕಪ್ಪು ಕೂದಲು ಹೆಚ್ಚಾಗುತ್ತದೆ – ಹಸಿರೆಲೆ ಬಣ್ಣ ಬಣ್ಣದ ತರಕಾರಿಗಳ ಸೇವನೆ ಒಳಿತು ತುಂಬಾನೇ ಒಳ್ಳೆಯದು.

ಕೊಬ್ಬಿನಾಂಶವಿರುವ ಆಹಾರ – ಮೀನು, ಮೊಟ್ಟೆ ದೇಹಕ್ಕೆ ಪ್ರೋಟೀನ್ ಒದಗಿಸುವಲ್ಲಿ ನೆರವಾಗುತ್ತವೆ. ಹಾಲು ಬೆಣ್ಣೆ, ಮೊಸರು ತಿನ್ನಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.