‘ಯಾವುದೋ ಪೋಲಿ ಮುಂಡೇವು ಕೆಲವು’ ದೂರುದಾರನ ವಿರುದ್ದ ಹೆಚ್.ಡಿ ರೇವಣ್ಣ ವಾಗ್ದಾಳಿ

ಕೇಂದ್ರ ಚುನಾವಣಾ ಆಯೋಗದಿಂದ ಮಾಜಿ ಸಚಿವ ಹೆಚ್,ಡಿ,ರೇವಣ್ಣ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿರುವ ಹಿನ್ನೆಲೆ, ನೀವು ಅಲ್ಲೇ ಇದ್ರಲ್ರೀ ಮಾಧ್ಯಮದವರು ಮತಗಟ್ಟೆ ಹತ್ತಿರ ನಾನ್ಯಾಕೆ ಅಲ್ಲಿರಲೀ ಕ್ಯೂ ತುಂಬಾ ಇತ್ತು ಅದಕ್ಕೆ ನಾನು ಅಲ್ಲಿ ಇದ್ದೆ ಕಣ್ರೀ ಎಂದು ಮೊದಲ ಬಾರಿಗೆ ಹೆಚ್,ಡಿ,ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವ್ರು ಅದು ಯಾವುದೋ ಪೋಲಿ ಮುಂಡೇವು ಕೆಲವು ಇವೆ, ಮೊದಲು ಚುನಾವಣಾ ಮುಖ್ಯಸ್ಥರು ದೂರು ಕೊಟ್ಟಿರೋನ ಹಿನ್ನೆಲೆ ತಿಳಿದುಕೊಳ್ಳಲಿ ಆ ದೂರು ಕೊಟ್ಟಿರೋನು ಬೆಳಿಗ್ಗೆ ಆಯ್ತು ಅಂದ್ರೆ ಆವಗ ಈವ್ ಕಚೇರಿಗೆ ಫೋನ್ ಮಾಡ್ಕೊಂಡು ಕುಂತಿರ್ತಾವೆ ಎಂದು ದೂರುದಾರನ ವಿರುದ್ದ ರೇವಣ್ಣ ವಾಗ್ದಾಳಿ ನಡೆಸಿದ್ರು.

ಲೋಕಸಭಾ ಚುನಾವಣಾ ಸಮಯದಲ್ಲಿ ಪಡುವಲ ಹಿಪ್ಪೆಯ ಮತಗಟ್ಟೆಯೊಳಗೆ 26 ನಿಮಿಷಗಳ ಕಾಲವಿದ್ದ ಕಾರಣ ವಕೀಲ ದೇವರಾಜೇಗೌಡ ಚುನಾವಣಾ ಆಯೋಗಕ್ಕೆ ದೂರುನೀಡಿದ್ರು. ಈಗ ಮತ್ತೆ ಹೆಚ್,ಡಿ,ರೇವಣ್ಣಗೆ ಸಂಕಷ್ಟವಾಗುವ ಸಾಧ್ಯತೆ ಇದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.