ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ಬಿಗ್ ಬಿ : ಆತಂಕದಲ್ಲಿ ಅಭಿಮಾನಿಗಳು

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅಭಿಮಾನಿಗಳಿಗೊಂದು ಕಹಿ ಸುದ್ದಿ. ಕಳೆದ ಮೂರು ದಿನಗಳಿಮದ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಪಾಸಣೆಗಾಗಿ ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮಿತಾಬ್ ಅವರು ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅಮಿತಾಬ್ ರೂಟಿನ್ ಚೆಕಪ್‍ಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಭಾನುವಾರ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಅಮಿತಾಬ್ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.ಗುರುವಾರ ಕರ್ವಾ ಚೌತ್ ಹಬ್ಬವಿದ್ದ ಕಾರಣ ಅಮಿತಾಬ್ ತಮ್ಮ ಟ್ವಿಟ್ಟರಿನಲ್ಲಿ ಜಯಾ ಬಚ್ಚನ್ ಜೊತೆಯಿರುವ ಕಪ್ಪು-ಬಿಳಿ ಬಣ್ಣದ ಫೋಟೋವನ್ನು ಟ್ವೀಟ್ ಮಾಡಿದ್ದರು. ಅಕ್ಟೋಬರ್ 11ರಂದು ಅಮಿತಾಬ್ ತಮ್ಮ 77ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಹಿಂದಿನ ದಿನ ಅಮಿತಾಬ್, ನಾನು ಹುಟ್ಟುಹಬ್ಬ ಆಚರಿಸಲು ಇಷ್ಟಪಡುತ್ತಿಲ್ಲ ಎಂದಿದ್ದರು.

ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ,”ಆಚರಿಸಲು ಏನಿದೆ? ಇದು ಸಾಮಾನ್ಯ ದಿನದಂತೆ. ನಾನು ಇನ್ನೂ ಕೆಲಸ ಮಾಡುತ್ತಿರುವುದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನ ದೇಹವು ನನ್ನ ಆತ್ಮದೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ನಾನು ಅಭಿಮಾನಿಗಳಲ್ಲಿ ಕೇಳುತ್ತೇನೆ” ಎಂದು ಮನವಿ ಮಾಡಿದ್ದರು.

ಅಮಿತಾಬ್ `ಬದ್ಲಾ’ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು `ಗುಲಾಬೋ ಸಿತಾಬೋ’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಚಿತ್ರಗಳನ್ನು ಹೊರತುಪಡಿಸಿ ಅಮಿತಾಬ್, `ಬ್ರಹ್ಮಾಸ್ತ್ರ’, `ಚೆಹರೆ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅಮಿತಾಬ್ ರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಿರುವ ವಿಷ್ಯ ಬಹಳ ರಹಸ್ಯವಾಗಿಡಲಾಗಿದೆ. ಬಿಗ್ ಬಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಯಾವುದೇ ಗಣ್ಯರಿಗೂ ತಿಳಿದಿರಲಿಲ್ಲ. ಅಲ್ಲಿಗೆ ಹೋಗಲು ಯಾರಿಗೂ ಅವಕಾಶವಿಲ್ಲ. ಇದನ್ನು ಸಾಮಾನ್ಯ ತಪಾಸಣೆ ಎನ್ನಲಾಗ್ತಿದೆ. ಆದ್ರೆ 3 ಗಂಟೆಗೆ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆ ಮಾಉಡಿದೆ. ನಾನಾವತಿ ಆಸ್ಪತ್ರೆ ಅಧಿಕೃತ ಆರೋಗ್ಯ ಬುಲೆಟಿನ್ ಹಂಚಿಕೊಂಡಿಲ್ಲ.

ಅಮಿತಾಬ್ ಬಚ್ಚನ್ ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗುತ್ತಿರುತ್ತಾರೆ. 2012 ರಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಅವರು 12 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಅಮಿತಾಬ್ ಪಿತ್ತಜನಕಾಂಗದ ತೊಂದರೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.