ಮಹದಾಯಿ ಹೋರಾಟಗಾರರಿಗೆ ರಾಜ್ಯಪಾಲರ ಭೇಟಿಯಾಗದ ವಿಚಾರಕ್ಕೆ ಕೋನರೆಡ್ಡಿ ಗರಂ…

ಧಾರವಾಡ : ಮಹದಾಯಿ ಹೋರಾಟಗಾರರಿಗೆ ರಾಜ್ಯಪಾಲರ ಭೇಟಿಯಾಗದ ವಿಚಾರಕ್ಕೆ ಮಾಜಿ ಶಾಸಕ ಕೋನರೆಡ್ಡಿ ಗರಂ ಆಗಿದ್ದಾರೆ.

ಹೋರಾಟಗಾರರು ಎರಡು ತಿಂಗಳ ಹಿಂದೇಯೆ ಪತ್ರ ಬರೆದಿದ್ದಾರೆ. ಅವರಿಗೆ ನೆನಪು ಮಾಡಿದ್ದಾರೆ, ನಂತರ ನಿಯೋಗ ಒಂದು ಹೋಗಿದೆ. ದೇಶದ ರಾಷ್ಟ್ರಪತಿಗೆ ಆಗಲಿ, ರಾಜ್ಯಪಾಲರಿಗಾಗಲಿ ದೇಶದ ಪ್ರಜೇಗಳು ಹೋಗಿ ಇಂತಹ ಸಿರಿಯಸ್ ವಿಷಯಗಳ ಬಗ್ಗೆ ಮನವಿ ಮಾಡಬಹುದು. ಅದು ಸಂವಿದಾನ ಬದ್ದವಾಗಿದೆ, ಅನುಮತಿ ನೀಡಬೇಕು. ಮಳೆ ಚಳಿಯ ನಡುವೆಯೂ ದರಣಿ ಮಾಡುತ್ತಿದ್ದಾರೆ, ಸರ್ಕಾರ ಪ್ರಯತ್ನ ಕೂಡಾ ಮಾಡುತ್ತಿಲ್ಲ.

ಬೆಂಗಳೂರಿಗೆ ಹೋದ್ರೆ ರೈತರಿಗೆ ಬೆಲೆನೇಯಿಲ್ಲದಾಗಿದೆ. ರೈತರನ್ನು ಕಡೆಗಣಿಸಿದ ಸರ್ಕಾರಕ್ಕೆ ಒಂದು ಕಾಲ ಬಂದೆ ಬರುತ್ತೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲದಂತೆ. ಹೀಗೆ ಮುಂದುವರೆದರೆ ನಿಮ್ಮನ್ನು ಮನೆಗೆ ಕಳಿಸುವಂತಹ ಕಲಾ ಬಂದೆಬರುತ್ತೆ. ರೈತರು ಹಗಲು ರಾತ್ರಿ ಕೂರಿಸಿದ ಶಾಪ ತಟ್ಟದೆ ಇರಲ್ಲ. ದಯವಿಟ್ಟು ರಾಜ್ಯಪಾಲರ ಬೇಟಿಗೆ ಅವಕಾಶ ಮಾಡಿಕೊಡಬೇಕಿತ್ತು. ರಾಜ್ಯಪಾಲರು ಮನವಿ ತೆಗೆದುಕೊಳ್ಳುವದಿಲ್ಲ ಎಂದು ಹೇಳಿ ಕಳುಹಿಸಬಾರದಿತ್ತು. ಸಂವಿಧಾನಬದ್ದವಾಗಿ ಎಲ್ಲರಿಗೂ ಬೇಟಿಯಾಗುವ ಅವಕಾಶ ಇದೆ ಎಂದರು.

ತಿರ್ಪು ಬಂದು ಎರಡು ವರ್ಷವಾಯಿತು. ಹುಬ್ಬಳ್ಳುಗೆ ಪ್ರದಾನಿಯವರು ಬಂದಾಗ ನೀರು ಕೊಡುವುದಾಗಿ ಹೇಳಿದ್ರು. ಪ್ರಲ್ಹಾದ ಜೋಷಿ ಯವರು ದೇಶದ ಮಂತ್ರಿಯಾಗಿದ್ದಾರೆ. ಅವರ ಮಾತು ನಡಿಯತ್ತೆ ದಯವಿಟ್ಟು ಮಹದಾಯೊ ನ್ಯಾಯಾಧಿಕರಣದ ಅಧಿಸೂಚನೆ ಹೊರಡಿಸಲು ಪ್ರಯತ್ನ ಮಾಡಿ ಎಂದು ಧಾರವಾಡದಲ್ಲಿ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ ಮನವಿ ಮಾಡಿಕೊಂಡರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.