ಮರಳು ದಿಬ್ಬ ಕುಸಿದು 3 ಮಕ್ಕಳ ಸಾವು ಪ್ರಕರಣ : ಜನ‌ ಸೇರುವ ಮುನ್ನ ಶವಗಳನ್ನ‌ ಸಾಗಿಸಿದ ದಂಧೆಕೋರರು

ಕೊಪ್ಪಳದಲ್ಲಿ ನಡೆದ  ಮರಳು ದಿಬ್ಬ ಕುಸಿದು 3 ಮಕ್ಕಳ ಸಾವು ಪ್ರಕರಣ ಸಾರ್ವಜನಿಕೆರ ಆಕ್ರೋಶಕ್ಕೆ  ಕಾರಣವಾಗಿದೆ.  ಮರಳು ಲೀಜ್ ಪಡೆದ ಮಾಫಿಯಾಕೋರರ ಅಮಾನವೀಯ ವರ್ತನೆಯಿಂದ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆನ್ನೆ ಮರಳು ದಿಬ್ಬ ಕುಸಿದು 3 ಮಕ್ಕಳ ಸಾವನ್ನಪ್ಪಿದ್ದರು.  ಘಟನೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಮೊದಲು ಬಂದ ದಂಧೆಕೋರರು,  ಮಕ್ಕಳ ಸಾವಿಗೆ ಪರಿಹಾರ ಕೊಡುತ್ತೇವೆ, ವಿಷಯ ಬಹಿರಂಗ ಮಾಡದಿರಲು ಪಾಲಕರಿಗೆ ತಾಕೀತು ಮಾಡಿದ್ದಾರೆ. ಜೊತೆಗೆ ಜನ‌ ಸೇರುವ ಮುನ್ನ ಶವಗಳನ್ನ‌ ಪಾಲಕರ ಮನೆಗೆ ಹೊತ್ತೊಯ್ದದಿದ್ದಾರೆ.

ಮೃತ ಮಕ್ಕಳ ಶವಗಳನ್ನು‌ ದೂರ ಸಾಗಿಸಲು ಯತ್ನಿಸಿ ಜನರಿಂದ ದಂಧೆಕೋರರಿಗೆ ಜನರಿಂದ ಛೀಮಾರಿ ಹಾಕಲಾಗಿದೆ. ಶವಗಳನ್ನ ಸಾಗಿಸುವುದನ್ನ ನೋಡಿದ ಸ್ಥಳೀಯರು, ಮರಳಿನ‌ ಗುಡ್ಡದ ಪಕ್ಕವೇ ಶವ ಇಡುವಂತೆ ಲೀಜ್ ದಾರರೊಂದಿಗೆ ಗ್ರಾಮಸ್ಥರ ವಾಗ್ವಾದಕ್ಕಿಳಿದಿದ್ದಾರೆ. ಘಟನೆ ಪರಿಶೀಲನೆಗೆ ಆಗಮಿಸಿದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.  ಈ ಮಧ್ಯೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ. ಮರಳು ಅಕ್ರಮ‌ ದಂಧೆಗೆ ಇನ್ನೂ ಎಷ್ಟು ಜೀವ ಬಲಿ ಕೊಡಬೇಕು ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಲಾಠಿ‌ ಚಾರ್ಜ್ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದಾಗ, ಕೊನೆಗೆ ಅಧಿಕಾರಿಗಳ ಮನವರಿಕೆಗೆ ಗ್ರಾಮಸ್ಥರು ಮಣಿದಿದ್ದಾರೆ. ಶವಪರೀಕ್ಷೆಗೆ ಕೊನೆಗೂ ಪೊಲೀಸ್ ವಾಹನದಲ್ಲೇ ಮಕ್ಕಳ ಶವ ಸಾಗಣೆ ಮಾಡಲಾಗಿದೆ.  ಮಕ್ಕಳನ್ನ ಕಳೆದುಕೊಂಡು ದುಃಖದಲ್ಲಿ ಪಾಲಕರು ದಿಕ್ಕು ತೋಚದಂತಾಗಿದ್ದಾರೆ. ಮಕ್ಕಳ ಶವ ನೀಡದಿರಲು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.