ಮನೆಯ ಮುಂದೆ ಕಟ್ಟಿದ್ದ ಕುರಿಗಳನ್ನು ಕದ್ದು ಪರಾರಿಯಾದ ಕಳ್ಳರು

ಮನೆಯ ಮುಂದೆ ಕಟ್ಟಿದ್ದ ಕುರಿಗಳ ಕಳ್ಳತನವಾದ ಘಟನೆ ವಿಜಯಪುರ ಜಿಲ್ಲೆ ಕವಲಗಿ ಗ್ರಾಮದಲ್ಲಿ ನಡೆದಿದೆ.

ರಮೇಶ ಇಂಗಳೇಶ್ವರ ಎಂಬುವವರಿಗೆ ಸೇರಿದ ಕುರಿಗಳನ್ನು ಮನೆಯಾಚೆ ಕಟ್ಟಿ ಹಾಕಿ ಒಳಗಡೆ ಮನೆಯವರು ಮಲಗಿದ್ದರು.  ಮನೆಯ ಹೊರಗೆ ಬಾಗಿಲು ಲಾಕ್ ಮಾಡಿ, ಬೈಕ್ ಪ್ಲಗ್ ಕಿತ್ತು ಖದೀಮರು ಕೃತ್ಯ ವೆಸಗಿದ್ದಾರೆ.

ಈ ಮುಂಚೆಯೂ ರಮೇಶ ಇಂಗಳೇಶ್ವರ ಅವರಿಗೆ ಸೇರಿದ 10 ಕುರಿಗಳ ಕಳ್ಳತನವಾಗಿತ್ತು. ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪ ಮಾಡಲಾಗುತ್ತಿದೆ.

ಇದೀಗ ಮತ್ತೆ 13 ಕುರಿಗಳ ಕಳ್ಳತನವಾಗಿದೆ. ಕುರಿಗಳ್ಳರ ಬಂಧನಕ್ಕೆ ಆಗ್ರಹಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.