ಮದ್ಯ ನಿಷೇಧಕ್ಕೆ ಪ್ರತಿಭಟನಾನಿರತ ಮಹಿಳೆಯರ ಮೇಲೆ ಡಿಸಿಎಂ ಗೋವಿಂದ ಕಾರಜೋಳ ಗರಂ…

ಮದ್ಯ ನಿಷೇಧಕ್ಕೆ ಪ್ರತಿಭಟನಾನಿರತ ಮಹಿಳೆಯರ ಮೇಲೆ ಡಿಸಿಎಂ ಗೋವಿಂದ ಕಾರಜೋಳ ಗರಂ ಆದ ಘಟನೆ ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ನಡೆದಿದೆ. ಯಾವಾಗ ಮದ್ಯ ನಿಷೇಧಿಸ್ತಿರಿ ಅನ್ನೋದನ್ನು ಸ್ಪಷ್ಟಪಡಿಸಿ ಎಂದು ಮಹಿಳೆಯರು ಪಟ್ಟು ಹಿಡಿದು, ನಿಮ್ಮದೇ ಸರ್ಕಾರವಿದೆ ಎಂದಾಗ ಡಿಸಿಎಂ ಗೋವಿಂದ ಕಾರಜೋಳ ಗರಂ ಆಗಿದ್ದಾರೆ.

ಟೈಮ್ ಕೊಡಿ ಅಂದ್ರೆ ಕೊಡೋಕೆ ಆಗೋಲ್ಲ ಎಂದು ಕ಻ರಜೋಳ ಮಹಿಳೆಯರ ಮೇಲೆ ಗರಂ ಆದ್ರು. ಸರ್ಕಾರದಲ್ಲಿ ತೀರ್ಮಾನ ತೆಗೆದುಕೊಳ್ಳೋದಕ್ಕೆ ನಾನೊಬ್ಬನೆ ಇಲ್ಲ. ಮದ್ಯ ನಿಷೇಧ ಬಗ್ಗೆ ನಿಮ್ಮ ಮನವಿ ಸಂಪುಟದ ಮುಂದಿಡ್ತೀನಿ. ನಾನು ಮದ್ಯ ನಿಷೇಧವಾಗಲಿ ಅನ್ನೋ ಪರವಿರುವನು. ಆದ್ರೆ ಸರ್ಕಾರದ ಮಟ್ಟದಲ್ಲಿ ಮದ್ಯ ಮುಕ್ತ ಕರ್ನಾಟಕ ತೀರ್ಮಾನವಾಗ್ಬೇಕು.

ಮದ್ಯ ಮುಕ್ತ ಕರ್ನಾಟಕಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸ್ತಿದ್ದ ನೂರಾರು ಮಹಿಳೆಯರ ಮನವಿ ಸ್ವೀಕರಿಸಿ,ಭರವಸೆ ಕೊಟ್ಟು ಡಿಸಿಎಂ ಗೋವಿಂದ ಕಾರಜೋಳ ತೆರಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.