ಮಗುವಿನೊಂದಿಗೆ ಹೇಮಾವತಿ ನದಿಗೆ ಹಾರಿ ತಾಯಿ ಮಗು ಆತ್ಮಹತ್ಯೆ….!

ಕೌಟುಂಬಿಕ ಕಲಹ ಹಿನ್ನೆಲೆ ಮಗುವಿನೊಂದಿಗೆ ಹೇಮಾವತಿ ನದಿಗೆ ಹಾರಿ ತಾಯಿ ಮಗು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಚನ್ನಾರಾಯಪಟ್ಟಣದ ಘನ್ನಿಕಡದಲ್ಲಿ ನಡೆದಿದೆ.

ಆಶಾ(38) ಮತ್ತು ದೀಕ್ಷಿತ್ ಗೌಡ(8) ಮೃತ ತಾಯಿ ಮತ್ತು ಮಗು ಆತ್ಮಹತ್ಯೆ ಮಾಡಿಕೊಂಡವರು. ಹೇಮಾವತಿ ನದಿಯಲ್ಲಿ ತಾಯಿ ಮಗುವಿನ ಶವ ಪತ್ತೆಯಾಗಿದೆ. ಆಶಾರ ಗಂಡ ತಮ್ಮ ಅಣ್ಣನ ಹೆಂಡತಿಯ ಬಳಿ ಸಾಲ ಪಡೆದಿದ್ದ. ಸಾಲದ ವಿಚಾರವಾಗಿ ನಿನ್ನೆ ಗಲಾಟೆ ನಡೆದಿದ್ದು, ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕಕಿಸಲಾಗಿದೆ.

ಚನ್ನರಾಯಪಟ್ಟಣದ ಗಾಯತ್ರಿ ನಗರದ ನಿವಾಸಿ ಆಶಾ ನಡುವೆ ಜಗಳವಾಗಿದೆ. ಸ್ಥಳಕ್ಕೆ ಪೊಲೀಸ್ರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.