ಮಗನ ಹುಟ್ಟುಹಬ್ಬಕ್ಕೆ ತಂದೆ ನೀಡಿದ್ದು ದುಬಾರಿ ಬೆಲೆಯ 2 ವಿಮಾನ…!

‘ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ’ ಈ ಮಾತು ನಿಮಗೆಲ್ಲಾ ಈ ಸ್ಟೋರಿ ಓದಿದ ಮೇಲೆ ನೆನೆಪಾಗೋದ್ರಲ್ಲೊ ಟೌಟೇ ಇಲ್ಲ ಬಿಡಿ. ಯಾಕೆಂದ್ರೆ  ಮಗನ ಹುಟ್ಟುಹಬ್ಬಕ್ಕೆ ತಂದೆ ನೀಡಿದ ದುಬಾರಿ ಉಡುಗೊರೆ ಯಾವುದು ಅಂತ ಗೊತ್ತಾದರೆ ನೀವು ದಂಗಾಗಿ ಹೋಗ್ತೀರಾ..

ಸೌದಿಯ ವ್ಯಕ್ತಿನೊಬ್ಬ ಬರೋಬ್ಬರಿ 329 ಮಿಲಿಯನ್ ದುಬಾರಿ ಬೆಲೆಯ ಎರಡು ಏರ್ಬಸ್ ಎ 350-1000 ಮಾಡಲ್ ವಿಮಾನವನ್ನು ತನ್ನ ಮಗನ ಹುಟ್ಟುಹಬ್ಬಕ್ಕೆ ಖರೀದಿ ಮಾಡಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾನೆ.

ಖರೀದಿಸಿದ ವ್ಯಕ್ತಿ ಇಂಧನ ಕ್ಷೇತ್ರದ ಹೂಡಿಕೆದಾರನಾಗಿದ್ದು, ವಾಯುಯಾನದಲ್ಲಿ ಅಧಿಕ ಆಸಕ್ತಿ ಹೊಂದಿದ್ದ ಮಗನ ಹುಟ್ಟು ಹಬ್ಬಕ್ಕೆ ಉಡುಗೊರೆ ಹುಡುಕುತ್ತಿರುವಾಗ ವಿಮಾನ ಉಡುಗೊರೆ ನೀಡುವ ಮನಸ್ಸು ಮಾಡಿದ್ದಾರೆ.

ಅಮೇರಿಕನ್ ಎಕ್ಸಪ್ರೆಸ್ ಗೆ ಪಾವತಿ ಮಾಡಲಾಗಿದ್ದು, ಕೆಲ ತಿಂಗಳ ಹಿಂದೆ ಏರ್ ಬಸ್ ನಿಂದ ವಿತರಣೆಗೆಂದು ಕರೆ ನೀಡಿತು. ಒಂದು ವಿಮಾನ ಮಗನಿಗೆ ಹಾಗೂ ಮತ್ತೊಂದು ವಿಮಾಣವನ್ನು ಸಹೋದರ ಸಂಬಂಧಿಗೆ ನೀಡಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.