ಮಕ್ಕಳಿಗೆ ಯಾವ ಆಹಾರ..? ಯಾವಾಗ ಕೊಡಬೇಕು..? ನಿಮಗಿದು ಗೊತ್ತಿರಲಿ…

ಮಕ್ಕಳಿಗೆ ಯಾವ ಆಹಾರ..? ಯಾವಾಗ ಕೊಡಬೇಕು..? ಈ ವಿಚಾರ ೆಷ್ಟೋ ಜನ ತಾಯಂದಿರಿಗೆ ಗೊತ್ತೇ ಇರುವುದಿಲ್ಲ.

ಮುದ್ದು ಮಕ್ಕಳು ಚಿಕ್ಕ ಶಿಶುಗಳು ದಪ್ಪವಾಗಿ, ಡುಮ್ಮ ಡುಮ್ಮಾಗಿ ಇರಬೇಕು ಅನ್ನೋದು ಪಾಲಕರ ಆಸೆ. ಹೀಗಾಗಿ ಮನೆ ಮಂದಿಯಲ್ಲ ಮಗು ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಂಡು ತಾವು ತಿನ್ನುವ ಆಹಾರವನ್ನೇ ಚೂರು ಚೂರಾಗಿ ತಿನ್ನಿಸಲು ಪ್ರಾರಂಭ ಮಾಡ್ತಾರೆ. ಆದರೆ ಹೀಗೆ ದೊಡ್ಡವರಿಗೆ ಪೌಷ್ಟಿಕ ಎನ್ನಿಸುವ ಆಹಾರವನ್ನು ಮಗುವಿಗೆ ತಿನ್ನಿಸುವುದು ಎಷ್ಟು ಸರಿ ನಾವು ನಿಮಗೆ ಹೇಳ್ತೀವಿ. ಪಾಲಿಸುವುದು ಮಾತ್ರ ನಿಮಗೆ ಬಿಟ್ಟಿದ್ದು.

ಹಸುವಿನ ಹಾಲು – ಹಸುವಿನ ಹಾಲನ್ನು ಒಂದು ವರ್ಷ ತುಂಬದ ಮಗುವಿಗೆ ಕೊಡಬೇಡಿ. ಯಾಕೆಂದರೆ ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಇದರಿಂದ ಕಿಡ್ನಿಗೆ ತೊಂದರೆಯಾಗಬಹುದು. ಹೀಗಾಗಿ ಇದನ್ನ ಕೊಡದೇ ಇರುವುದು ಒಳ್ಳೆಯದು.

ನಟ್ಸ್ ಮಗುವಿಗೆ ಬೇಕಾ..? –  ನಟ್ಸ್ ಪೌಷ್ಟಿಕತೆಯನ್ನು ದೇಹಕ್ಕೆ ಒದಗಿಸುತ್ತದೆ. ಹಾಗಂತ ತಾಯಂದಿರು ನಟ್ಸ್ ಪುಡಿ ಮಾಡಿ ಮಕ್ಕಳಿಗೆ ತಿನ್ನಿಸುತ್ತಾರೆ. ಆದರೆ ಶಿಶುಗಳಿಗೆ ನಟ್ಸ್ ಅಗತ್ಯವಿಲ್ಲ. ಯಾಕೆಂದರೆ ಮಗುವಿಗೆ ಇದನ್ನು ಜೀರ್ಣಿಸಿಕೊಳ್ಳವ ಶಕ್ತಿ ಇರೋದಿಲ್ಲ. ಹೀಗಾಗಿ ಇದರ ಬಗ್ಗೆ ಅಗತ್ಯ ಸಲಹೆ ಪಡೆಯಲೇಬೇಕು.

ಮೀನು ಯಾಕೆ ಬೇಡ..? – ಮೀನಿನಲ್ಲಿ ಪಾದರಸ ಅಂಶ ಹೆಚ್ಚಿರುತ್ತದೆ. 3-4 ವರ್ಷದ ಮಕ್ಕಳಿಗಂತೂ ಈ ಆಹಾರ ಬೇಡವೇ ಬೇಡ.

ಮೊಟ್ಟೆ – ಮೊಟ್ಟೆ ಕೂಡ ಮಗುವಿಗೆ ಹಾನಿಕಾರಕ. ನಿಮ್ಮ ಮಗು 5 ವರ್ಷ ಆಗುತ್ತಿದ್ದಂತೆ ನೀವು ಮೊಟ್ಟೆ ಕೊಡಬಹುದು. ಆದರೆ ಅದರಿಂದಾಗುವ ಪ್ರಯೋಜನಗಳನ್ನು ಕೂಡ ತಾಯಂತಿರು ತಿಳಿದಿರಬೇಕು.

ಹಸಿ ತರಕಾರಿ – ಹಸಿ ತರಕಾ ತಿನ್ನುವುದು ಕಷ್ಟ. ಜೊತೆಗೆ ಉಸಿರಾಟದ ತೊಂದರೆಯಾಗಬಹುದು.

ಜೇನು ತುಪ್ಪಾ – ಜೇನು ತುಪ್ಪಾ ಆರೋಗ್ಯಕ್ಕೆ ಒಳ್ಳೆಯದು. ಆದರೆ ಶಿಶುಗಳಿಗಲ್ಲ. ಇದು ನಂಜು ಉಂಟುಮಾಡುವ  ಸಾಧ್ಯತೆ ಇರುತ್ತದೆ. ಹಾಗಂತ ಇದು ಎಲ್ಲಾ ಮಕ್ಕಳಿಗೂ ಆಗುತ್ತದೆ ಎಂದೇಳಲು ಕೂಡ ಸಾಧ್ಯವಿಲ್ಲ.

ಕೆಫೇನ್ ಅಂಶವಿರುವ ಪಾನಿಯ – ಮಗುವಿನ ದೇಹಕ್ಕೆ ಕೆಫೇನ್ ಅಂಶವಿರುವ ಪಾನೀಯ ನೀಡುವುದರಿಂದ ನಿದ್ರಾಹೀನತೆ ಸಂಭವಿಸಬಹುದು. ಹೀಗಾಗಿ ಕೆಫೇನ್ ಅಂಶವಿರುವ ಪಾನಿಯಾದಿಂದ ಶಿಶುವನ್ನ ದೂರವಿರಿಸುವುದು ಒಳ್ಳೆಯದು.

ಒಟ್ಟಿನಲ್ಲಿ ನಿಮ್ಮ ಮಗು ಆರೋಗ್ಯವಾಗಿರಬೇಕು ಅಂದರೆ ಇಂತಹ ಆಹಾರದಿಂದ ದೂರವಿರುವುದು ಒಳ್ಳೆಯದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.