ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಶುರುವಾದ ಮೈತ್ರಿ ನಾಯಕರ ಟಾಕ್ ವಾರ್…..

ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಶುರುವಾದ ಮೈತ್ರಿ ನಾಯಕರ ಟಾಕ್ ವಾರ್.

ಹೌದು.. ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ವಿರುದ್ದ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.  ಮಂಡ್ಯದಲ್ಲಿ ಪುಟ್ಟರಾಜು ಸೇರಿದಂತೆ ಕೈ ನಾಯಕರ ವಿರುದ್ಧ  ಮಾಜಿ ಸಿ.ಎಂ. Hdk ವಿರುದ್ದ ಚಲುವರಾಯಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ಮಾಜಿ ಸಚಿವ ಪುಟ್ಟರಾಜು ಜಿಲ್ಲೆಯ ಪ್ರಶ್ನಾತೀತ ನಾಯಕ. ಜೆಡಿಎಸ್ ನಲ್ಲಿ ದೇವೇಗೌಡ್ರು ಹೆಂಗೋ ಇವ್ರುನು ಹಂಗೆ ಎಂದು ವ್ಯಂಗ್ಯವಾಡಿದ್ದಾರೆ. ಪಕ್ಷ ಬಿಟ್ಟೋದವರ ಬಗ್ಗೆ ಇವ್ರು ಮೊನ್ನೆ ಸಭೆಯಲ್ಲಿ ಇವ್ರಿಗೂ ಹಿಂದೆ ಪಕ್ಷದವರಂತೆ ಬುದ್ದಿ ಕಲಿಸ್ತಾರೆ ಎಂದು ಗದರಿಸಿದ್ದಾರೆ. ಜನ‌ ನಮಗೆ ಬುದ್ದಿ ಕಲಿಸಿದಂತೆ ನಿಮಗೂ ಕಲಿಸಿದ್ದಾರೆ,ಸರ್ಕಾರ ಬಿದ್ದಾಗಿದೆ, ಲೋಕಸಭೆ ಚುನಾವಣೆಯಲ್ಲಿ ಜನ್ರು ನಿಮಗೂ ಪಾಠ ಕಲಿಸಿದ್ದಾರೆ ಎಂದ ಚಲುವರಾಯಸ್ವಾಮಿ ಹರಿ ಹಾಯ್ದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಕೊಂಡು ಅವ್ರ ಕ್ಷೇತ್ರದಲ್ಲಿ ನಿಖಿಲ್ ಗೆ ಎಷ್ಡು ಲೀಡ್ ಕೊಡಿಸಿದ್ದಾರೆಂದು ಗೊತ್ತಿದೆಯಲ್ಲ. ಮಂತ್ರಿಯಾಗಿದ್ದಾಗ ಕುದುರೆ ಮೇಲಿದ್ದ ಆದ್ರೆ ಈಗ ಕೆಳಗಿಲಿದ ಮೇಲು ಮಾತಾಡ್ತಾನೆ. ನಿಖಿಲ್ ಎರಡುವರೆ ಲಕ್ಷ ಲೀಡ್ ನಿಂದ ಗೆಲ್ತಾನೆ ಇಲ್ದಿದ್ರೆ ರಾಜಕೀಯಕ್ಕೆ ರಾಜೀನಾಮೆ ಕೊಡ್ತಿನಿ ಅಂದಿದ್ದ. ಆದ್ರೆ ಈಗ ಅದನ್ನ ತಮಾಷೆ ಅಂತಾನೆ. ರಾಜಕೀಯದಲ್ಲಿ ಇದ್ದಾಗ ಮಾತನ್ನ ಸ್ವಲ್ಪ ಹಿಡಿತದಲ್ಲಿಟ್ಟು ಮಾತನಾಡಬೇಕು. ರಾಜಕೀಯದಲ್ಲಿ ಏರಿಳಿತ ಸಹಜ ಸೋಲೋದು ಗೆಲ್ಲೋದು ಇದ್ದೆ ಇರುತ್ತೆ ಎಂದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.