ಮಂಡ್ಯಲ್ಲಿಂದು ಬಿಜೆಪಿ ರಾಜ್ಯಾಧ್ಯಕ್ಷರ ಪ್ರವಾಸ : ಉಪಚುನಾವಣೆಯಲ್ಲಿ ಕಮಲ ಅರಳಿಸಲು ರೂಪುರೇಷಿ ಸಿದ್ಧತೆ

ಮಂಡ್ಯದ ಕೆ.ಆರ್.ಪೇಟೆ ಉಪಚುನಾವಣೆ ಹೊಸ್ತಿಲ್ಲಲ್ಲಿ ಇಂದು ಮಂಡ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ನೀಡಿದ್ರು.ಮಂಡ್ಯದಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಕಾರ್ಯಕಾರಣಿ ಮತ್ತು‌ ಮುಖಂಡರೊಂದಿಗೆ ಕೋರ್ ಕಮೀಟಿ ಸಭೆ ನಡೆಸಿದ್ರು. ಈ ಮೂಲಕ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಕಮಲ ಅರಳಿಸಲು ರೂಪುರೇಷೇ ಸಿದ್ದತೆ ಮಾಡಿಕೊಂಡ್ರು.

ಹೌದು! ಮಂಡ್ಯದ ಕೆ.ಆರ್.ಪೇಟೆ ಉಪಚುನಾವಣೆ ಹೊಸ್ತಿಲ್ಲಲ್ಲಿ ಸಕ್ಕರೆನಾಡು ಮಂಡ್ಯಕ್ಕೆ ಇಂದು‌ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದು ಭೇಟಿ ನೀಡಿದ್ರು. ‌ಮಂಡ್ಯಕ್ಕೆ ಆಗಮಿಸಿದ ರಾಜ್ಯಧ್ಯಕ್ಷರಿಗೆ ಕಾರ್ಯಕರ್ತರು ಷುಗರ್ ಫ್ಯಾಕ್ಟರಿ ವೃತ್ತದಿಂದ ಅದ್ದೂರಿ ಸ್ವಾಗತಕೋರಿದ್ರು. ಬೈಕ್ ರ್ಯಾಲಿ ಮೂಲಕ ಕಾರ್ಯಕರ್ತರು ಮೆರವಣಿಗೆಯಲ್ಲಿ ಮಂಡ್ಯಕ್ಕೆ ಕರೆತಂದ್ರು.ಬಳಿಕ ಮಂಡ್ಯದ ಕಾವೇರಿ ವನದಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ಹಾಗೂ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಬಳಿ ಇದೇ ಪ್ರೇರಣೆಯ ಆಧಾರದ ಮೇಲೆ ರಾಷ್ಟ್ರ ಕಟ್ಟುವ ಕಾರ್ಯ ಮಾಡ್ತಿನಿ ಅಂದ್ರು.

ಬಳಿಕ ಮಂಡ್ಯದ ಗಾಯತ್ರಿ ಸಮುದಾಯದಲ್ಲಿ‌ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಯಲ್ಲಿ ಪಕ್ಷದ ಸ್ಥಿತಿಗತಿಯ ವಿವರಣೆ ಪಡೆದುಕೊಂಡ್ರು. ಅಲ್ದೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಕುರಿತಾಗಿ ರೂಪು ರೇಷೆಗಳು ಮತ್ತು ಆಗಬೇಕಾಗಿರೋ ಕಾರ್ಯಗಳ ಬಗ್ಗೆ ಕಾರ್ಯಕರ್ತರು ಮತ್ತು ಮುಖಂಡರಿಗೆ ಸಲಹೆ ಸೂಚನೆ ನೀಡಿದ್ರು. ಸಭೆ ಬಳಿಕ ಮಾತನಾಡಿ ಮಂಡ್ಯದ ಮತಗಟ್ಟೆಯಲ್ಲಿ ಬಿಜೆಪಿಯನ್ನು ಪೇಜ್ ಪ್ರಮುಖ್ ಆಧಾರದಲ್ಲಿ ಮತ್ತಷ್ಟು ಗಟ್ಟಿಗೊಳಿಸ್ತಿನಿ ಎಂದ್ರು. ಇನ್ನು ತಮ್ಮ ವಿರುದ್ದ ಹಾಗು ಹುತಾತ್ಮ ಸ್ವಾತಂತ್ರ್ಯ ಹೋರಾಟಗೋರ ವೀರಸಾವರ್ಕರ್ ವಿರುದ್ದ ಮಾತನಾಡಿದ ಮಾಜಿ ಸಿ.ಎಂ.ಗೆ ನಾನು ರಾವನಷ್ಟು ಬುದ್ದಿವಂತ ಅಲ್ಲ ಅಂತಾ ತಿರುಗೇಟು ನೀಡಿದ್ರು.

ಒಟ್ಟಾರೆ ಉಪ ಚುನಾವಣೆ ಹೊಸ್ತಿಲ್ಲಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರ ಮಂಡ್ಯ ಭೇಟಿ ಜಿಲ್ಲೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.ಉಪ ಚುನಾವಣೆ ಗೆಲ್ಲಲು ಬಿಜೆಪಿ ಜಿಲ್ಲೆಯಲ್ಲಿ ಸಾಕಷ್ಟು ಕಸರತ್ತು‌ ನಡೆಸಿದ್ದು ಎಷ್ಟರ ಮಟ್ಟಿಗೆ ನಡೆಸ್ತಿರೋ ಈ ಕಸರತ್ತು ವರ್ಕೌಟ್ ಆಗುತ್ತೆ ಅನ್ನೋದ್ನ ಕಾದು ನೋಡಬೇಕಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.