ಭ್ರಷ್ಟಾಚಾರ,ಲೂಟಿ ಮಾಡಿದರವ ಪರ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ರೆ‌ ದುರಂತ-ಪ್ರಲ್ಹಾದ್ ಜೋಶಿ

ಭ್ರಷ್ಟಾಚಾರ ಮತ್ತು ಲೂಟಿ ಮಾಡಿದರವ ಪರ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ರೆ‌ ದುರಂತ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದ್ದಾರೆ.

ಡಿ.ಕೆ. ಶಿವಕುಮಾರ್ ಮಗಳ ಹೆಸರಲ್ಲಿ 108 ಕೋಟಿ ಆಸ್ತಿ ಇದೆ. ಅವರ ಹೆಸರಲ್ಲಿ 800 ಕೋಟಿ ರೂಪಾಯಿ ಇದೆ. ಅದನ್ನೆಲ್ಲ ಸ್ವಂತ ದುಡಿದಿದ್ದಾ ಎಂದು ಉತ್ತರ ಕೊಡಬೇಕು. ಲೂಟಿ ಮಾಡಿದವರ ಪರ ಕೆಲವು ಪಟ್ಟಭದ್ರರು ಪ್ರತಿಭಟನೆ ಮಾಡ್ತಿದ್ದಾರೆ.
ಜಾತಿ ಹೆಸರಲ್ಲಿ ಪ್ರತಿಭಟಿಸಿದ್ರೆ ಜನರು ಸೊಪ್ಪು ಹಾಕಲ್ಲ. ಭ್ರಷ್ಟಾಚಾರ ವಿರೋಧಿಸಲೆಂದೇ ಮೋದಿಯವರಿಗೆ ಜನರು ಓಟ್ ಹಾಕಿದ್ದಾರೆ.

ಕಳಂಕ ರಹಿತ ಆಡಳಿತ ನಡೆಸಿದ್ದಕ್ಕೆ ಜನರು ಎರಡನೆಯ ಬಾರಿ ಅಧಿಕಾರ ಕೊಟ್ಟಿದ್ದಾರೆ. ಜಾತಿ‌ ಹೆಸರಲ್ಲಿ ಭ್ರಷ್ಟಾಚಾರ,‌ ಲೂಟಿ ಮಾಡಿದ್ರೆ ನಡೆಯುತ್ತೆ ಅನ್ನುವ ಮನೋಭಾವನೆ ಸರಿಯಲ್ಲ. ಜಾತಿ ಹೆಸರಲ್ಲಿ ಭ್ರಷ್ಟರ ಬೆಂಬಲಕ್ಕೆ ನಿಲ್ಲುವುದು ದುರಂತ. ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆ ವಿಚಾರ ಗಮನಕ್ಕೆ ಬಂದಿದೆ.

ವಿತ್ತ ಸಚಿವರೊಂದಿಗೆ ಈ ಕುರಿತು ಚರ್ಚಿಸಲಾಗುವುದು. ರಾಜ್ಯಕ್ಕೆ ಶೀಘ್ರದಲ್ಲಿಯೇ ನೆರೆ ಪರಿಹಾರ ಬಿಡುಗಡೆ ಯಾಗಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.