ಭರ್ಜರಿಯಾಗಿ ತೆರೆ ಕಂಡ ‘ಕುರುಕ್ಷೇತ್ರ’ : ಸಿನಿಮಾ ನೋಡಿ ಅಭಿಮಾನಿಗಳು ಫುಲ್ ಫಿದಾ…

ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ, ರವಿಚಂದ್ರನ್ ಹೀಗೆ ಬಹುತಾರಾಗಣದ ಕುರುಕ್ಷೇತ್ರ ಇವತ್ತು ರಿಲೀಸ್ ಆಗಿದೆ. ಇಂದು ಬೆಳಗಿನ ಜಾವ 4.30ಕ್ಕೆ ಕೋರಮಂಗಲದ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಗೊಂಡಿತು. ಹಬ್ಬದ ನಡುವೆಯೂ ಅಭಿಮಾನಿಗಳು ಚಿತ್ರಮಂದಿರಕ್ಕೆ ಆಗಮಿಸಿ ಮಹಾಭಾರತದ ದೃಶ್ಯ ವೈಭವವನ್ನು ಕಣ್ತುಂಬಿಕೊಂಡರು.

ಈಗಾಗಲೇ ಮೂರು ದಿನಗಳ ಟಿಕೆಟ್ ಬುಕ್ ಆಗಿದ್ದು, ಜನರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ. ದರ್ಶನ್ ಸೇರಿದಂತೆ ಎಲ್ಲ ಕಲಾವಿದರ ನಟನೆಗೆ ಆಭಿಮಾನಿಗಳು ಫಿದಾ ಆಗಿದ್ದು, ಶತಕ ಬಾರಿಸೋದು ಖಂಡಿತ ಎಂದು ಪ್ರೇಕ್ಷಕರು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ಬೆಂಗಳೂರಿನ ಮಂತ್ರಿಮಾಲ್‍ನಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆಯಿತು. ದರ್ಶನ್, ಸುಮಲತಾ ಅಂಬರೀಶ್, ರಾಕ್‍ಲೈನ್ ವೆಂಕಟೇಶ್ ಪ್ರೀಮಿಯರ್ ಶೋ ವೀಕ್ಷಿಸಿದರು ಬಳಿಕ ಮಾತಾಡಿದ ಸುಮಲತಾ ಅಂಬರೀಶ್ ಎಲ್ಲರ ನಟನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರೂ ಸಿನಿಮಾ ನೋಡಿದ ಬಳಿಕ ನಾನು ಪ್ರತಿಕ್ರಿಯಿಸ್ತೇನೆ ಅಂತ ದರ್ಶನ್ ಹೇಳಿದ್ರು. ಇತ್ತ ರಾತ್ರಿ ಬೆಂಗಳೂರಿನ ಜೆಪಿ ನಗರದಲ್ಲಿ ಶೋಗೆ ಕಾದು ಕುಳಿತಿದ್ದ ಅಭಿಮಾನಿಗಳು ದರ್ಶನ್ ಕಟೌಟ್‍ಗೆ ಅಭಿಷೇಕ ಮಾಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.