ಬಿಜೆಪಿ ಪರ ಹಾಗೂ ವಿರುದ್ಧವಾಗಿ ಬ್ಯಾಟಿಂಗ್ ಮಾಡಿದ ಮಾಜಿ ಸಚಿವ ಶಿವರಾಜ ತಂಗಡಗಿ…!

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಸೋಮಸಾಗರ ಗ್ರಾಮದಲ್ಲಿಂದು ಮಾಜಿ ಸಚಿವ ಶಿವರಾಜ ತಂಗಡಗಿ ನೆರೆ ಪರಿಹಾರ ನೀಡದ ಕೇಂದ್ರ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡುವ ಜೊತೆಗೆ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸಂಸದರಿಗೆ ನೀಡಬೇಕಿದ್ದ ಸೀರೆ, ಬಳೆ, ಕುಂಕುಮ ಹಾಗೆ ಇಟ್ಟಿದ್ದೇವೆ. ನೆರೆ ಸಂತ್ರಸ್ತರಿಗೆ ಕೊಡಬೇಕಾದ ಪರಿಹಾರ ಇನ್ನೂ ಕೇಂದ್ರ ಕೊಟ್ಟಿಲ್ಲ. ಮೋದಿ ಮತ್ತು ಬಿಜೆಪಿಯನ್ನು ಓಡಾಡಿಸಿ ಹೊಡೆಯುವ ಕಾಲ ಬರ್ತಿದೆ. ಟೊಮ್ಯಾಟೋ, ಈರುಳ್ಳಿ ಎಸೆಯುವ ಕಾಲ ಬರುತ್ತೆ ಎಂದು ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಸೋಮಸಾಗರ ಗ್ರಾಮದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ತಂಗಡಗಿ ಸೀರೆ ಕಳಿಸ್ತಾರೆ ಅಂತಾನೆ ಕೇಂದ್ರ 1200 ಕೋಟಿ ಅನುದಾನ ನೀಡಿದೆ. ಕೂಡಲೇ ಸರ್ಕಾರ ಎರಡನೇ ಹಂತದ ಅನುದಾನ ನೀಡಬೇಕು. ಇದಕ್ಕೆ 15 ದಿನ ಗಡುವು ನೀಡುತ್ತೇವೆ ಅಂತಾ ಮಾಜಿ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ಕೊಟ್ಟಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ 13 ರಿಂದ 14 ಸೀಟ್ ಗೆಲ್ಲಲಿದೆ. ಉಪಚುನಾವಣೆ ನಂತರ ಬಿಜೆಪಿ ಜೊತೆಗೆ ಬಿಎಸ್ ವೈ ಪತನವಾಗಲಿದೆ. ಬಿಎಸ್ ವೈ ಗೆ ಪಕ್ಷದಲ್ಲಿ ಟಾರ್ಚರ್ ಶುರವಾಗಿದೆ. ಆದ್ರೆ ಕೊಪ್ಪಳ‌ ಜಿಲ್ಲೆಯ ಮೂರು ಶಾಸಕರು ಬಾಯಿ ಬಿಚ್ವುತ್ತಿಲ್ಲ.

ಈ ವೇಳೆ ಯಡಿಯೂರಪ್ಪನವರ ಪರವಾಗಿ ಮಾತನಾಡುತ್ತಿಲ್ಲ ಎನ್ನುತ್ತಿಲ್ಲ ಸಿಎಂ ಯಡಿಯೂರಪ್ಪ ಹಾಗೂ ಶಾಸಕ ಯತ್ನಾಳ ಪರ ತಂಗಡಗಿ ಬ್ಯಾಟಿಂಗ್ ಮಾಡಿದರು.

ಎಲ್ಲ ಪಕ್ಷದಿಂದ ತಗೆದು ಹಾಕ್ತಾರೆ ಅಂತಾ ಶಾಸಕರಲ್ಲಿ ಭಯ ಕಾಡುತ್ತಿದೆ. ಬಿಎಸ್ ವೈ ಮನೆಯಲ್ಲಿ ಅಡುಗೆ ಮಾಡುವವರನ್ನು ಬಿಜೆಪಿ ಬದಲಿ ಮಾಡಿದೆ. ಬಿಎಸ್ ವೈ ರಿಗೆ ಕಿರುಕುಳ ನೀಡುವ ಮೂಲಕ ಲಿಂಗಾಯತ ಸಮುದಾಯಕ್ಕೆ ನೋವು ಮಾಡಿದೆ. ಬಿಜೆಪಿಯಲ್ಲಿ ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ ತಾಕತ್ತಿನ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ನಿಜವಾದ ಕಾಳಜಿ ಬಿಜೆಪಿಯಲ್ಲಿ ಯತ್ನಾಳಗಿದೆ ಎಂದರು.

ನಳೀಕ ಕುಮಾರ ಕಟೀಲ್ ಸದ್ಯ 32 ಜಿಲ್ಲೆ ಅಂತಾ ಹೇಳಿದ್ದಾರೆ. ಮುಂದೆ 56 ಜಿಲ್ಲೆಗಳು ಅಂತಾನೂ ಹೇಳಬಹುದು. ಇಂತಹ ಕನಿಷ್ಠ ಜ್ಞಾನ ಇಲ್ಲದವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಕಿಡಿ ಕಾರಿದರು.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.