ಬಿಗ್ ಬಾಸ್ ಮನೆಯಲ್ಲಿ ಹೈ ಡ್ರಾಮಾ : ಕೋಪದಲ್ಲಿ ಹಾಸಿಗೆಯನ್ನು ಕಿತ್ತು ಹಾಕಿದ ಸ್ಪರ್ಧಿ

ತಮಿಳಿನ ಬಿಗ್ ಬಾಸ್ ಸೀಸನ್ -3 ರಲ್ಲಿ ಸ್ಪರ್ಧಿಗಳು ತಾಳ್ಮೆಯನ್ನು ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಸಹಸ್ಪರ್ಧಿ ಎಲಿಮಿನೇಟ್ ಆಗಿದ್ದರಿಂದ ಕೋಪ ಮತ್ತು ನೋವಿನಿಂದ ಸ್ಪರ್ಧಿಯೊಬ್ಬ ಬಿಗ್ ಬಾಸ್ ಮನೆಯ ಪ್ರಾಪರ್ಟಿಯಾದ ಹಾಸಿಗೆಯನ್ನು ಹಾಳುಗೆಡವಿದ್ದಾನೆ.

ವಾರಾಂತ್ಯದ ಎಲಿಮಿನೇಶನ್ ನಲ್ಲಿ ಸ್ಪರ್ಧಿ ರೇಷ್ಮ ಹೊರ ನಡೆದರು. ಇದು ಮನೆಯ ಎಲ್ಲಾ ಸದಸ್ಯರಿಗೂ ಅಚ್ಚರಿ ತಂದಿತ್ತು ಮತ್ತು ಈ ಪೈಕಿ ಮುಗೇನ್ ಬಿಕ್ಕಿ ಬಿಕ್ಕಿ ಅತ್ತರು.

ರೇಷ್ಮಾಳ ಎಲಿಮಿನೇಶನ್ ಬಗ್ಗೆ ಸ್ಪರ್ಧಿಗಳಾದ ಮುಗೇನ್, ಸಾಕ್ಷಿ, ಶೆರಿನ್ ಮತ್ತು ಅಭಿರಾಮಿ ಚರ್ಚೆ ನಡೆಸುವ ವೇಳೆ, “ಮುಗೇನ್ ಜತೆ ಮಾತನಾಡಿದರೆ ಏನಾದರೂ ತೊಂದರೆ ಇದೆಯೇ’’ ಎಂದು ಸಾಕ್ಷಿ ಅಭಿರಾಮಿಯನ್ನು ಪ್ರಶ್ನಿಸಿದ್ದಾಳೆ. ರೇಷ್ಮಾ ಮನೆಯಿಂದ ಹೊರಹೋಗಿರುವ ಈ ವೇಳೆಯಲ್ಲಿ ಇದು ಅನವಶ್ಯಕ ವಿಚಾರ ಎಂದು ಅಭಿರಾಮಿ ಪ್ರತಿಕ್ರಿಯಿಸಿದರು. ಇದರಿಂದ ಸಾಕ್ಷಿ ಮತ್ತು ಅಭಿರಾಮಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಳುತ್ತಲೇ ಅಭಿರಾಮಿ ಅಲ್ಲಿಂದ ಹೋಗಿದ್ದರು.

ಇನ್ನೊಂದೆಡೆ, ಅಭಿರಾಮಿಯನ್ನು ಸಮಾಧಾನ ಮಾಡಲು ಮುಗೇನ್ ಬಂದನಾದರೂ ಸಾಧ್ಯವಾಗುವುದಿಲ್ಲ. ಇದರಿಂದ ಕೋಪೋದ್ರಿಕ್ತನಾದ ಮುಗೇನ್ ಹಾಸಿಗೆಯನ್ನು ಕಿತ್ತು ಹಾಕಿದ್ದಾನೆ. ಈ ಘಟನೆಯಿಂದ ಎಚ್ಚೆತ್ತ ಇತರೆ ಸ್ಪರ್ಧಿಗಳು ಬಂದು ಮುಗೇನ್ ಮತ್ತು ಅಭಿರಾಮಿಯನ್ನು ಸಮಾಧಾನಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.