ಬಿಗ್ ಬಾಸ್ ಕನ್ನಡ ಸೀಸನ್ 7 : ಚೈತ್ರಾ ಕೋಟೂರ್ ಕನಸಲ್ಲಿ ಶೈನ್ ಶೆಟ್ಟಿ – ತಾಳಿಕೋಟೆ ಸಲಹೆ

ಬಿಗ್ ಬಾಸ್ ಕನ್ನಡ ಸೀಸನ್ 7ನಲ್ಲಿ ಸ್ಪರ್ಧಿಗಳ ಆಟ ಭರ್ಜರಿಯಾಗಿದೆ. ಕೆಲವು ಸ್ಪರ್ಧಿಗಳು ಗೆಲ್ಲುವ ಕನಸು ಕಾಣುತ್ತಿದ್ದರೆ, ಇನ್ನೂ ಕೆಲವು ಸ್ಪರ್ಧಿಗಳಿಗೆ ಏನೇನೋ ಕನಸು ಬೀಳಲು ಶುರುವಾಗಿದೆ. ಬಿಗ್ ಬಾಸ್ ಸೀಸನ್ 7 ಪ್ರಾರಂಭವಾದಾಗಿನಿಂದ ಚೈತ್ರಾ ಕೋಟೂರ್ ಅದ್ಯಾಕೋ ಶೈನ್ ಶೆಟ್ಟಿ ಜೊತೆ ಮಾತನಾಡುವ ರೀತಿ ಒಂದು ರೀತಿ ಚಿತ್ರವಿಚಿತ್ರವಾಗಿರುತ್ತೆ.

ಆರಂಭದಲ್ಲಿ ಇದು ಚೈತ್ರಾ ಅವರಿಗೆ ಬಿಗ್ ಬಾಸ್ ನೀಡಿದ ಟಾಸ್ಕ್ ಇರಬೇಕು ಎಂದು ಇನ್ನುಳಿದ ಸ್ಪರ್ಧಿಗಳು ಭಾವಿಸಿದರೂ ದಿನಗಳೆದಂತೆ ಚೈತ್ರಾ ಅವರ ಚಿತ್ರವಿಚಿತ್ರ ಮಾತುಗಳು ಕಾಮನ್ ಆಗಿವೆ. ಅದು ಕೆಲವು ಬಾರಿ ಹೇಗಿರುತ್ತೆ ಅಂದ್ರೆ ಚೈತ್ರಾ ಅವರು ಶೈನ್ ಅವರನ್ನು ಯಾವ ರೀತಿ ಕಾಣುತ್ತಾರೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿಸುವಂತೆ.

ಹೌದು.. ನಿನ್ನೆ ಬೆಳಿಗ್ಗೆ ಅವರಾಡಿದ ಮಾತನ್ನ ರಾಜು ತಾಳಿಕೋಟೆಯವರು ಕಾಮಿಡಿ ಮಾಡಿದ್ದು ಹೀಗೆ. ಬೆಳಿಗ್ಗೆ  ಚೈತ್ರಾ ಅವರು ತಮಗೊಂದು ಕನಸು ಬಿದ್ದ ವಿಚಾರ ತಿಳಿಸಿದರು. ಆ ಕನಸಲ್ಲಿ ಶೈನ್ ಬಂದಿದ್ರಂತೆ. ಅದು ಯಾವ ಸ್ಥಿತಿಯಲ್ಲಿ ಅಂದ್ರೆ ಬೆತ್ತಲೆಯಾಗಿ. ಈ ರೀತಿ ಕನಸುಗಳು ಇತ್ತೀಚೆಗೆ ಚೈತ್ರಾ ಅವರ ಕನಸಲ್ಲಿ ಬೀಳಲಾರಂಭಿಸಿವೆಯಂತೆ.

ಚೈತ್ರಾ ಅವರ ಈ ಮಾತು ಕೇಳಿದ ತಾಳಿಕೋಟೆ, ನೀನು ಶೈನ್ ಗೇ ಕೇಳು. ಯಾಕೆ ಆ ಸ್ಥಿತಿಯಲ್ಲಿ ಕನಸ್ಸಲ್ಲಿ ಬಂದಿದ್ರಿ..? ಬಿಡದೇ ಕೇಳು. ಬಾತ್ ರೂಮ್ ಗೆ ಕರೆದುಕೊಂಡು ಹೋಗಿ ಕೇಳು ಎಂದು ತಾಳಿಕೋಟೆ ಸಲಹೆ ನೀಡಿದರು. ಇದೊಂದು ರೀತಿ ಕಾಮಿಡಿ ಪೀಸ್ ಗೆ ಕಾಮಿಡಿ ಮಾಡಿದಂತಿತ್ತು.

ಹೀಗೆ ಮುಂದಿನ ದಿನಗಳಲ್ಲಿ ಅದ್ಯಾರ್ಯಾರಿಗೆ ಅದ್ಯಾವ ರೀತಿ ಕನಸು ಬಿಗ್ ಬಾಸ್ ಮನೆಯಲ್ಲಿ ಬೀಳುತ್ತೋ ಗೊತ್ತಿಲ್ಲ. ಒಟ್ನಲ್ಲಿ ಚೈತ್ರ ಆಡಿದ ಮಾತು ಬಿಗ್ ಬಾಸ್ ನೋಡುಗರಿಗೆ ಥ್ರಿಲ್ ಕೊಟ್ಟಿದಂತು ನಿಜ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.