ಬಾಗಲಕೋಟೆ, ಶಿವಮೊಗ್ಗದಲ್ಲಿ ಕಿಚ್ಚಾ ಫ್ಯಾನ್ಸ್ ಸಂಭ್ರಮಾಚರಣೆ : ಪೈಲ್ವಾನ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

ಬಾಗಲಕೋಟೆಯಲ್ಲಿ ಪೈಲ್ವಾನ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸುದೀಪ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ಅಭಿನವ ಚಕ್ರವರ್ತಿಯ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಬಾಗಲಕೋಟೆ ನಗರದ ಶಕ್ತಿ ಚಿತ್ರಮಂದಿರದಲ್ಲಿ ಮೊದಲ ಶೋ ಆರಂಭಗೊಂಡಿದ್ದು,  ಸಿನೆಮಾ ನೋಡಲು ಮುಗಿಬಿದ್ದಿದ್ದಾರೆ ಪ್ರೇಕ್ಷಕರು. ಹೂವಿನಿಂದ ಚಿತ್ರಮಂದಿರ ಅಲಂಕಾರ, ಪೈಲ್ವಾನ್ ಸಿನೆಮಾದ ಬ್ಯಾನರ್ ಹಾಕಲಾಗಿದೆ. ನಟ ಸುದೀಪ್ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಜೈಘೋಷಣೆ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು. ಸುದೀಪ್ ಭಾವಚಿತ್ರಯುಳ್ಳ ಟೀಶರ್ಟ್ ತೊಟ್ಟ ಯುವಕರ ಹಿಂದೆ ಕುಂಬಳಕಾಯಿ ಒಡೆದ ಅಭಿಮಾನಿಗಳು ಸಂಭ್ರಮಿಸಿದರು.

ಇನ್ನೂ ಶಿವಮೊಗ್ಗದಲ್ಲೂ ಕಿಚ್ಚಾ ಅಭಿಮಾನಿಗಳಿಂದ ಸಂಭ್ರಮಾಚರಣೆ ಮಾಡಲಾಯಿತು. ವೀರಭದ್ರೇಶ್ವರ ಚಿತ್ರಮಂದಿರದ ಮುಂಭಾಗ ಡೋಳ್ಳು ಕುಣಿತ ಜೊತೆಗೆ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಕಿಚ್ಚ ಸುದೀಪ್ ಕಟೌಟ್ ಗೆ ಕ್ಷೀರಾಭಿಷೇಕ, ಹೂವಿನ‌ಹಾರ ಹಾಕಿ ಘೋಷಣೆ ಕೂಗಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ 3 ಚಿತ್ರಮಂದಿರದಲ್ಲಿ ಬಿಡುಗಡೆ ಕಾಣುತ್ತಿರುವ ಪೈಲ್ವಾನ್, ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಫ್ಯಾನ್ಸ್ ಸಂಘಟನೆ ವತಿಯಿಂದ ಸುದೀಪ್ ಕಟೌಟ್ ಗೆ ಹಾರ ಹಾಕಿ ಸಂಭ್ರಮದಿಂದ ತೆರೆಕಂಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.