ಬಂಗಾಳದ ಪ್ರಸಿದ್ದ ಚಿತ್ರನಟಿಯರು ದುರ್ಗಾ ದೇವಿಗೆ ಗೌರವವಾಗಿ ಮಾಡಿದ ನೃತ್ಯ ಸಖತ್ ವೈರಲ್….

ಮುಂದಿನ ತಿಂಗಳು ಪಶ್ಚಿಮ ಬಂಗಾಳದಲ್ಲಿ ನಡೆಯುವ ದುರ್ಗಾ ಪೂಜೆಯ ಅಂಗವಾಗಿ ಸಂಸದರಾಗಿ ಆಯ್ಕೆಯಾದ ಬಂಗಾಳದ ಪ್ರಸಿದ್ದ ಚಿತ್ರನಟಿಯರಾದ ನುಸ್ರತ್ ಜಹಾನ್ ಮತ್ತು ಮಿಮಿ ಚಕ್ರವರ್ತಿಯವರು ದುರ್ಗಾ ದೇವಿಗೆ ಗೌರವವಾಗಿ ಹಾಡಿಗೆ ನೃತ್ಯ ಮಾಡುವ ಮೂಲಕ ಗಮನಸೆಳೆದಿದ್ದಾರೆ.

ಅಕ್ಟೋಬರ್ 4 ರಿಂದ ಅಕ್ಟೋಬರ್ 8 ರವರೆಗೆ ಬಂಗಾಳದಾದ್ಯಂತ ಈ ಹಬ್ಬವನ್ನು ಭಕ್ತಿ ಸಡಗರದಿಂದ ಆಚರಿಸಲಾಗುತ್ತಿದ್ದು ಇದಕ್ಕೆ ಮುನ್ನ ಭರ್ಜರಿ ತಯಾರಿ ನಡೆದಿದೆ.
ಕ್ಯಾಪ್ಟನ್ ಟಿಎಂಟಿ ಬಿಡುಗಡೆ ಮಾಡಿದ ಈ ವಿಡಿಯೋದಲ್ಲಿ “ಮಾ ದುರ್ಗಾ ಮತ್ತು ಅವಳ ಆಂತರಿಕ ಶಕ್ತಿಗೆ ಗೌರವ”. (‘ಆಶೆ ಮಾ ದುರ್ಗಾ ಶೇ’) ಹಾಡಿಗೆ ನೃತ್ಯ ಮಾಡುತ್ತಿರುವ ಇಬ್ಬರು ನಟಿ-ರಾಜಕಾರಣಿಗಳ ಜೊತೆಗೆ ಬಂಗಾಳಿ ಚಲನಚಿತ್ರ ನಟಿ ಸುಭಾಶ್ರೀ ಗಂಗೂಲಿ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಡಿಯೋವು ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದು ಆಗಲೇ ಐದು ದಿನಗಳಲ್ಲಿ 20ಲಕ್ಷ ಬಾರಿ ವೀಕ್ಷಿಸಲ್ಪಟ್ಟಿದೆ. ಜೊತೆಗೆ ಹತ್ತು ಸಾವಿರ ಮಂದಿ ಅದನ್ನು ಷೇರ್ ಮಾಡಿದ್ದಾರೆ.

ಇಂದ್ರಾದಿಪ್ ದಾಸ್ ಗುಪ್ತಾ ಸಂಯೋಜನೆ ಮತ್ತು ಬಾಬಾ ಯಾದವ್ ನೃತ್ಯ ಸಂಯೋಜನೆ ಮಾಡಿದ ‘ಆಶೆ ಮಾ ದುರ್ಗಾ ಶೇ’ ವಿಡಿಯೋವು ಬಾಂಗ್ಲಾದೇಶದ ಗಾಯಕರನ್ನು ಸಹ ಒಳಗೊಂಡಿದೆ.

ತೃಣಮೂಲ ಕಾಂಗ್ರೆಸ್ ಸಂಸದ ನುಸ್ರತ್ ಜಹಾನ್ ಪಶ್ಚಿಮ ಬಂಗಾಳದ ಬಸಿರ್ಹತ್ ಸ್ಥಾನದಿಂದ ಗೆದ್ದರೆ, ಅವರ ಪಕ್ಷದ ಸಹೋದ್ಯೋಗಿ ಮಿಮಿ ಚಕ್ರವರ್ತಿ ಜಾದವ್ ಪುರದಿಂದ ಸಂಸದರಾಗಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.