ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸ್ತಿರೋ ದಕ್ಷಿಣ ಚಿತ್ರರಂಗ…!

ಪ್ರಧಾನಿ ಮೋದಿ ವಿರುದ್ಧ ದಕ್ಷಿಣ ಚಿತ್ರರಂಗ ಅಸಮಾಧಾನ ವ್ಯಕ್ತಪಡಿಸ್ತಿದೆ.

ಶನಿವಾರ ಚೇಂಜ್ ವಿಥಿನ್ ಹೆಸರಿನಲ್ಲಿ ಬಾಲಿವುಡ್ ಸೆಲೆಬ್ರಟಿಗಳನ್ನು ಭೇಟಿಯಾಗಿದ್ದ ನರೇಂದ್ರ ಮೋದಿಯ ಕಿವಿಯನ್ನ ನಯವಾಗಿಯೇ ಹಿಂಡಿದ್ದಾರೆ ನವರಸ ನಾಯಕ ಜಗ್ಗೇಶ್. ಹೌದು… ಶನಿವಾರ ಚೇಂಜ್ ವಿಥಿನ್ ಹೆಸರಿನಲ್ಲಿ ಬಾಲಿವುಡ್ ಸೆಲೆಬ್ರಟಿಗಳು ಪ್ರಧಾನಿ ಮೋದಿಯವರೊಂದಿಗೆ ಫೋಸ್ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಫೋಟೋಗಳಿಗೆ ಚಿರು ಸೊಸೆ ಉಪಾಸನಾ ಕೊಣಿಡೇಲ ನಂತ್ರ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗ ಅಂದ್ರೆ ಬರೀ ಬಾಲಿವುಡ್ ಅಲ್ಲ ಅಂತ ಟ್ವೀಟ್ ಮಾಡಿದ್ದ ರಾಮ್ ಚರಣ್ ಪತ್ನಿ ಉಪಾಸನಾ ಮಾತಿಗೆ ಜಗ್ಗೇಶ್ ದನಿಗೂಡಿಸಿದ್ದಾರೆ.

ದಕ್ಷಿಣ ಭಾರತದ ಕಲಾವಿದರು ನಿಮ್ಮ ನಿರ್ಧಾರಗಳನ್ನ ಗೌರವಿಸುತ್ತಾರೆ. ನಮಗೂ ಅವಕಾಶ ಕೊಡಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಉತ್ತರ ಭಾರತೀಯರಿಗಿಂತ ನಾವು ನಿಮ್ಮ ನಿರ್ಧಾರಗಳನ್ನ ನಾವು ಹೆಚ್ಚು ಬೆಂಬಲಿಸುತ್ತೀವಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.