ಪ್ರಚಾರಕ್ಕೆ ಬಂದ್ರು, ಭರಪೂರ ಭರವಸೆ ನೀಡಿದ್ರು : ನೀತಿ ಸಂಹಿತೆ ಉಲ್ಲಂಘಿಸಿದ ಸಚಿವ ಸೋಮಣ್ಣ…!

ಪ್ರಚಾರಕ್ಕೆಂದು ಬಂದ್ರು ಭರಪೂರ ಭರವಸೆ ನೀಡಿದ ಸಚಿವ ವಿ.ಸೋಮಣ್ಣ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

ಹೌದು… ಹುಣಸೂರು ತಾಲೂಕಿನ ಚಿಕ್ಕ ಹೆಜ್ಜೂರು ಗ್ರಾಮದಲ್ಲಿ  ಬಿಜೆಪಿ ಪ್ರಚಾರದ ವೇಳೆ ಸಾರ್ವಜನಿಕರ ಅಹವಾಲು ಆಲಿಸಿದ ಸಚಿವ ವಿ.ಸೋಮಣ್ಣ, ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ಪ್ರವಾಹದಿಂದ ಉಂಟಾಗಿರುವ ಸಮಸ್ಯೆಗಳು, ಕೋಣನಹೊಸಳ್ಳಿ ಮನೆಗಳ ಸ್ಥಳಾಂತರ, ರಸ್ತೆ ಅಭಿವೃದ್ಧಿ, ಕಾಡಾನೆ ಹಾವಳಿ ತಡೆಯಲು ರೈಲ್ವೆ ಕಂಬಿ ತಡಗೋಡೆ ಹೀಗೆ ಸ್ಥಳೀಯ ಸಮಸ್ಯೆಗಳನ್ನು ಸೋಮಣ್ಣ ಆಲಿಸಿದ್ದಾರೆ.

ನಾನು ಜಿಲ್ಲಾ ಮಂತ್ರಿ ಆಗಿದ್ದೇನೆ. ಎಲ್ಲ ಸಮಸ್ಯೆಗಳನ್ನೂ ಹಂತ ಹಂತವಾಗಿ ಬಗೆಹರಿಸೋಣ. ಎಲ್ಲರೂ ಬಿಜೆಪಿಗೆ ಮತ ಹಾಕಿ. ಕಾಡಂಚಿನ ಗ್ರಾಮಗಳು 25 ವರ್ಷಗಳ ಹಿಂದೆ ಹೇಗಿದ್ದವೋ ಹಾಗೆಯೇ ಇವೆ. ಭಾಷಣ ಮಾಡಲು ನಾಯಕರು ಬರುತ್ತಾರೆ. ಹಳ್ಳಿ ಜನರ ಕಷ್ಟ ನೋಡಲು ಯಾರೂ ಬರಲ್ಲ.

ಆದರೆ ನಾನು ಕಾಡಂಚಿನ ಗ್ರಾಮಗಳಿಗೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.