ಪರೀಕ್ಷೆಗೆ ಬಂತು ಡಿಫರೆಂಟ್ ಐಟಂ : ಮಕ್ಕಳ ತಲೆಗೆ ಡಬ್ಬಿ ಹಾಕಿ ಪರೀಕ್ಷೆ ಬರಿಸಿದ ಪರೀಕ್ಷಾ ಮಂಡಳಿ

ಪರೀಕ್ಷಾ ಹಾಲನಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯದಂತೆ ಕಾವಲುಗಾರನಾಗಿ ಸಿಸಿಟಿವಿ ಕ್ಯಾಮರಾ ನೋಡಿದ್ದೆವೆ. ಆದ್ರೆ ಇಲ್ಲೊಂದು ಕಾಲೇಜನಲ್ಲಿ ಡಿಪರೆಂಟ್ ಐಟಂ ಬಂದಿದೆ. ಅದೇನು ಅಂತ ಹೇಳಿದ್ರೆ ನೀವು ಆಶ್ಚರ್ಯ ಪಡೋದ್ರಲ್ಲಿ ನೋ ಡೌಟ್..

ಹೌದು..  ಕುದುರೆಯ ಕಣ್ಣಿಗೆ ಪಟ್ಟೆ ಹಾಕುವ ರೀತಿಯಲ್ಲಿ ಮಕ್ಕಳ ತೆಲೆಗೆ ಡಬ್ಬಿ ಹಾಕಿ ಪರೀಕ್ಷಾ ಮಂಡಳಿ ಪರೀಕ್ಷೆ ಬರಿಸಿದ ಘಟನೆ ಹಾವೇರಿ ನಗರದ ಬಗತ್ ಪಿ.ಯು.ಕಾಲೇಜಿನಲ್ಲಿ ನಡೆದಿದೆ.

ನಗರದ ದನದ ಮಾರುಕಟ್ಟೆಯ ಎದುರಿಗಿರುವ ಕಾಲೇಜ್ ನಲ್ಲಿ  ನಿನ್ನೆ ಮಕ್ಕಳ ತೆಲೆಗೆ ಡಬ್ಬಿ ಹಾಕಿಸಿ ಆಡಳಿತ ಮಂಡಳಿ ಪರೀಕ್ಷೆ ಬರಿಸಿದೆ. ವಿದ್ಯಾರ್ಥಿಗಳ ತೆಲೆಗೆ ಡಬ್ಬಿ ಹಾಕಿದ ಪೋಟೊಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದ್ದು, ಈ ಈ  ಯೋಜನೆಗೆ ಡಿ.ಡಿ.ಪಿ.ಯು ಆಡಳಿತ ಮಂಡಳಿ ವಿರುದ್ದ ಪುಲ್ ಗರಂ ಆಗಿದೆ.

ಡಿ.ಡಿ.ಪಿ.ಯು ಆಡಳಿತ ಮಂಡಳಿ ವಿರುದ್ದ ಪುಲ್ ಗರಂ ಆದ ಬಳಿಕ ಆಡಳಿತ ಮಂಡಳಿ ಇವತ್ತು ಸಹಜ ಸ್ಥಿತಿಯಯಲ್ಲಿ ಪರೀಕ್ಷೆ ಬರಿಸುತ್ತಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.