ಪರಿಹಾರ ಬಾರದೆ ರೈತ ಆತ್ಮಹತ್ಯೆ ಹಿನ್ನೆಲೆ : ಕಳಸ ಬಂದ್ ಮಾಡಿ ಸರ್ಕಾರದ ವಿರುದ್ಧ‌ ಆಕ್ರೋಶ

ಪರಿಹಾರ ಬಾರದೆ ರೈತ ಆತ್ಮಹತ್ಯೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಬಂದ್ ಮಾಡಿ ಸ್ಥಳೀಯರು ಸರ್ಕಾರದ ವಿರುದ್ಧ‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪರಿಹಾರ ಬಾರದೆ ತಿಂಗಳ ಅವಧಿಯಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಸ್ವಯಂ ಘೋಷಿತ ಅಂಗಡಿ-ಮುಂಗಟ್ಟು ಬಂದ್ ಮಾಡಿ ಸರ್ಕಾರದ ವಿರುದ್ಧ ಾಕ್ರೋಶ ಹೊರ ಹಾಕಿದ್ದಾರೆ .

ಸರ್ಕಾರ ಇದ್ದೂ ಇಲ್ಲದಂತಾಗಿದೆ.ಸಚಿವರು, ಶಾಸಕರು, ಸಿಎಂ ಭೇಟಿ ನಾಮಕಾವಸ್ಥೆಗಷ್ಟೆ ಎಂಬಂತಾಗಿದೆ.  ಕಳಸದ ಬಹುತೇಕ ಭಾಗ ತೀವ್ರ ಸಂಕಷ್ಟಕ್ಕೀಡಾಗಿದೆ. ಸರ್ಕಾರದ ಪರಿಹಾರ ಇನ್ನೂ ಮರೀಚಿಕೆ ಎಂದು ಕಳಸ ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.