ನ್ಯಾಯ ಕೊಡಿಸಲು ಹೋಗಿದ್ದ ವ್ಯಕ್ತಿಯ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ…

ಮಂಡ್ಯ ಮದ್ದೂರಿನ ಚಿಕ್ಕಮರೀಗೌಡನ ದೊಡ್ಡಿಯ ಜೀತ ದೌರ್ಜನ್ಯ ಪ್ರಕರಣಕ್ಕೆ ನ್ಯಾಯ ಕೊಡಿಸಲು ಹೋಗಿದ್ದ ವ್ಯಕ್ತಿಯ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ.

ಮದ್ದೂರಿನ ತಹಶೀಲ್ದಾರ್ ಕಚೇರಿ ಮುಂದೆ ಜೀತ ವಿಮುಕ್ತ ಸಂಘಟನೆ ಮತ್ತು ದಲಿತ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಗುತ್ತಿದೆ.

ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿರುವ ಪ್ರತಿಭಟನಾಕಾರರು, ಸೆ-೧೨ ರಂದು ನ್ಯಾಯ ಕೇಳಲು ಹೋಗಿದ್ದಾ ಮುತ್ತೇಶ್ ಮೇಲೆ ಹಲ್ಲೆಯಾಗಿತ್ತು. ಈ ಸಂಬಂಧ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿದ್ರು ಇದುವರೆಗೂ ಪೊಲೀಸರು ಯಾರನ್ನು ಬಂಧಿಸಿಲ್ಲ.

ಪೊಲೀಸರ ನಡೆ ಖಂಡಿಸಿ ನೂರಾರು ಪ್ರತಿಭಟನಾಕಾರರಿಂದ ಪ್ರತಿಭಟನಾ ಧರಣಿ ಮಾಡಲಾಯ್ತು. ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನಾಕಾರರ ಆಗ್ರಹಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.