ನಿನ್ನೆ ಸಂಜೆ ೬ ಗಂಟೆಯಿಂದ ಪ್ರವಾಹದಲ್ಲಿ ಸಿಲುಕಿದ್ದ ದಂಪತಿಗಳ ರಕ್ಷಣಾ ಕಾರ್ಯ ಪೂರ್ಣ…

ನಿನ್ನೆ ಸಂಜೆ ೬ ಗಂಟೆಯಿಂದ ಪ್ರವಾಹದಲ್ಲಿ ಸಿಲುಕಿದ್ದ ದಂಪತಿಗಳ ರಕ್ಷಣಾ ಕಾರ್ಯ ಯಶಸ್ವಿಯಾಗಿ ಮುಗಿಸಿದ್ದಾರೆ ರಕ್ಷಣಾ ಸಿಬ್ಬಂದಿಗಳು. ಪರಿಣಾಮ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಧಾರವಾಡದಲ್ಲಿ ನೆನ್ನೆ ರಾತ್ರಿಯಿಂದ ಸುರಿದ ಮಳೆಗೆ ಗ್ರಾಮಗಳು, ರಸ್ತೆ, ಹಳ್ಳ, ಕೆರೆಗಳು ಜಲಾವೃತವಾಗಿವೆ.

ಧಾರವಾಡದ ನವಲಗುಂದ ತಾಲೂಕಿನ ತುಪ್ಪರಿ ಹಳ್ಳದಲ್ಲಿ  ಸವಿತಾ ಮತ್ತು ಪ್ರಕಾಶ ದಂಪತಿ ಪ್ರವಾಹದಲ್ಲಿ ಸಿಲುಕಿದ್ದರು. ರಕ್ಷಣೆ ಮಾಡಿದ ಅಗ್ನಿಶಾಮಕದಳ ಸಿಬ್ಬಂದಿಗಳು ನಿರಂತರ ೧೬ ಗಂಟೆಗಳ ಕಾಲ ರಕ್ಷಣಾ ಕಾರ್ಯ ನಡೆಸಿ ದಂಪತಿಗಳ ರಕ್ಷಣೆ ಮಾಡಿದ್ದಾರೆ. ದಂಪತಿಗಳು ಜಾವೂರ ಗ್ರಾಮದವರು. ರಕ್ಷಣಾ ಕಾರ್ಯ ಮುಗಿಯುವವರೆಗೂ ನವಲಗುಂದ ತಹಶೀಲ್ದಾರ ನವೀನ ಹುಲ್ಲೂರ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ಬೋಟ್ ಮೂಲಕ ತೆರಳಿ ದಂಪತಿಗಳನ್ನು ರಕ್ಷಣೆ ಮಾಡಿದ ರಕ್ಷಣಾ ತಂಡಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.