ನಿದ್ದೆ ಇಲ್ಲ.. ನಿದ್ದೆ ಇಲ್ಲ.. ಅನ್ನೋರು 4-7-8 ಟೆಕ್ನಿಕ್ ಪಾಲಿಸಿ ನೋಡಿ…

ನಿದ್ದೆ ಬಂದಿಲ್ಲ… ನಿದ್ದೆ ಬಂದಿಲ್ಲ… ಅನ್ನೋರಿಗೆ ಕೆಲವು ಸೂತ್ರಗಳ ಬಗ್ಗೆ ಮಾಹಿತಿ ಇರಲೇಬೇಕು.

ಹಾಸಿಗೆ ಮೇಲೆ ಬೀಳ್ತಾಯಿದ್ದಂತೆ ಹಾಯಾಗಿ ನಿದ್ದೆ ಮಾಡಿದವರೇ ಪುಣ್ಯವಂತರು. ದಿನ ನಿತ್ಯ ಕಷ್ಟ ಪಟ್ಟು ನಿದ್ದೆ ಮಾಡಬೇಕು ಅಂತ ಅನ್ಕೊಂಡಾಗಲೆ ನಿದ್ದೆ ಬಾರದೇ ಹೋದ್ರೆ ಹೇಗಿರುತ್ತೆ. ಮಾನಸಿಕ ಒತ್ತಡ, ಕೆಲಸ, ಮಕ್ಕಳು ರಾತ್ರಿ ಹೊತ್ತು ಮಲಗದೇ ಇದ್ದಾಗ ಆಗದ ನಿದ್ದೆ ಹೀಗೆ ನಿದ್ದೆ ಮಾಡದೇ ಇರಲು ಕಾರಣಗಳು ಒಂದೇ ಎರಡಾ? ಎಲ್ಲಾ ಸರಿಯಿದ್ದು ನಿದ್ದೆ ಬರೋದಿಲ್ಲ ಅನ್ನೋರೇ ಹೆಚ್ಚು. ಹಾಗಾದ್ರೆ ಸುಖ ನಿದ್ರೆ ಹೇಗೆ ಮಾಡಬೇಕು…? ಅನ್ನೋರಿಗೆ ಇಲ್ಲಿದೆ ಕೆಲ ಸೂತ್ರಗಳು. ಪಾಲಿಸಿ ಖಂಡಿತ ನಿದ್ದೆ ಬರುತ್ತೆ.

ಉಸಿರಾಟ – ಸುಗಮವಾಗಿ ಉಸಿರಾಡಿದ್ರೆ ಆರೋಗ್ಯ ಹೆಚ್ಚಾಗುತ್ತದೆ. ಅಷ್ಟಕ್ಕೂ ನಿದ್ದೇಗೂ ಉಸಿರಾಟಕ್ಕೂ ಏನ್ ಸಂಬಂಧ ಅಂದ್ರಾ..? ಇಲ್ಲಿದೆ ಅದಕ್ಕುತ್ತರ. ನಿದ್ರೆ ಬಾಋದೇ ಇರುವುದಕ್ಕೆ ಉಸಿರಾಟಸ ಸಮಸ್ಯೆ , ಸರಿಯಾದ ಆಕ್ಸಿಜನ್ ಇಲ್ಲದೇ ಇರುವುದಾಗಿದೆ.

ಹೀಗಾಗಿ 4-7-8 ಟೆಕ್ನಿಕ್ ಅಂದ್ರೆ ಮೈಂಡ್ ಫುಲ್ ಬ್ರೀತ್  ಟೆಕ್ನಿಕ್ ಪಾಲಿಸಿ ನೋಡಿ. ನಿದ್ರೆಗೂ ಮುನ್ನ ಅಂದರೆ ಊಟವಾಧ ಗಂಟೆಯ ಬಳಿಕ ಅಧಿಕವಾಗಿ ಉಸಿರನ್ನು ಎಳೆದುಕೊಳ್ಳಿ, ನಂತರ ನಿಧಾನವಾಗಿ ಬಿಡಿ. ಹೀಗೆ 10 ರಿಂದ 20 ಬಾರಿ ಮಾಡುವುದರಿಂದ ಮೈಂಡ್ ಫ್ರೆಶ್ ಆಗುತ್ತದೆ. ಶುದ್ಧವಾದ ಮತ್ತು ಅಗತ್ಯವಾದ ಆಕ್ಸಿಝನ್ ದೊರೆಯುತ್ತದೆ.

ಆಗ ಮಲಗಿದ 2 ನಿಮಿಷಕ್ಕೆ ಚೆನ್ನಾಗಿ ನಿದ್ದೆ ಬರುತ್ತದೆ. ಸೋ ನೀವೊಂದು ಬಾರಿ ಟ್ರೈ ಮಾಡಿ. ಯಾವುದೇ ಮಾತ್ರೆ ಔಷಧಿ ಇಲ್ಲದೆ ಸುಖವಾಗಿ ನಿದ್ರೆ ಮಾಡಬಹುದು.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.