ನಾನು ಬಂದಿದ್ದೇನೆ ಎಂದು ವಿಶೇಷ ಊಟ ಮಾಡಿಸಿದ್ದೀರಾ? ಪರಿಹಾರ ಕೇಂದ್ರಕ್ಕೆ ಆರ್.ಅಶೋಕ್ ಭೇಟಿ

ನೆರೆ ವೀಕ್ಷಣೆಗೆಂದು ಬಂದ ಕಂದಾಯ ಸಚಿವ ಆರ್.ಅಶೋಕ್  ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಿದ್ದರಹಳ್ಳಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯಾರ್ಯಾರು ಊಟ ಮಾಡಿಲ್ಲ, ಬನ್ರಪ್ಪಾ ಊಟ ಮಾಡೋಣ ಎಂದು ನಿರಾಶ್ರಿತರನ್ನ ಊಟಕ್ಕೆ ಕರೆದು ನಿರಾಶ್ರಿತರ ಜೊತೆಯೇ ಊಟ ಮಾಡಿದರು. ನೆರೆಪೀಡಿತರೊಟ್ಟಿಗೆ ಕುಳಿತು ಊಟದ ಬಳಿಕ ನಿತಾಶ್ರಿತರೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ನಾನು ಬಂದಿದ್ದೇನೆ ಎಂದು ವಿಶೇಷ ಊಟ ಮಾಡಿಸಿದ್ದೀರಾ? ಇಲ್ಲ ಇದೇ ರೀತಿ ಪ್ರತಿದಿನವೂ ವಿಶೇಷ ಊಟ ಇರುತ್ತಾ? ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಗೆ ಆರ್ ಅಶೋಕ್ ಪ್ರಶ್ನೆ ಮಾಡಿದರು.

ನಾನು ಬಂದಿರುವುದಕ್ಕೆ ಈ ರೀತಿ ವಿಶೇಷ ಊಟ ಮಾಡಿಸಿದ್ದೀರಾ..? ಸುಳ್ಳು ಹೇಳಬೇಡಿ ದಿನವೂ ಹೋಳಿಗೆ ಮಾಡಿಸುತ್ತೀರಾ? ಇಲ್ಲಿ ಬಂದ ಕೂಡಲೇ ಊಟ ಸರಿಯಿಲ್ಲ ಎಂದು ಅವರು ಹೇಳಿಕೊಂಡರು. ಅದಕ್ಕೆ ಕೇಳಿದ್ದು ಪ್ರತಿದಿನವೂ ಇದೇ ರೀತಿ ವಿಶೇಷವಾಗಿರುತ್ತಾ? ಅಂದಿದ್ದಕ್ಕೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಕಕ್ಕಾಬಿಕ್ಕಿಯಾದರು.

ಇದೇ ವೇಳೆ ಡಿಕೆಶಿ ತಿಹಾರ್ ಜೈಲುವಾಸದ ಬಗ್ಗೆ ಮಾತನಾಡಿದ ಆರ್. ಅಶೋಕ್, ಡಿಕೆಶಿ ಬಂಧನ ಪ್ರಕರಣ ಕ್ಕೂ ಬಿಜೆಪಿ ಗೂ ಯಾವುದೇ ಸಂಬಂಧವಿಲ್ಲ. ಕಾನೂನು ತನ್ನದೆ ಆದ ಕ್ರಮಕೈಗೊಂಡಿದೆ. ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು. 60 ವರ್ಷ ಅಡಳಿತ ಕಾಂಗ್ರೆಸ್‌ ನಡೆಸಿದೆ ಆ ಸಂದಂರ್ಭದಲ್ಲಿ ಬಹಳಷ್ಟು ಜನ‌ ಜೈಲಿಗೆ ಹೋಗಿದ್ದಾರೆ. ಎಮರ್ಜೆನ್ಸಿ ಸಮಯದಲ್ಲಿ ಬಿಎಸ್ ಯಡಿಯೂರಪ್ಪ, ಅನಂತಕುಮಾರ್, ನಾನು ಜೈಲಿಗೆ ಹೋಗಿದ್ದೇವೆ. ಕಾನೂನು ತನ್ನದೆ ಅದ ಕ್ರಮಕೈಗೊಳ್ಳುತ್ತದೆ ಬಿಜೆಪಿಗೆ ಸಂಬಂಧವಿಲ್ಲ. ಬಿಜೆಪಿಗೆ ತಳಕು ಹಾಕುವ ಕೆಲಸ ಮಾಡಬೇಡಿ. ನಿಮ್ಮ ತಪ್ಪನ್ನು ನಮ್ಮ ಮೇಲೆ ಹಾಕಬೇಡಿ ಎಂದರು.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.