ನನ್ನ ಮುಗಿಸಲು ಸುಪಾರಿ – ಅನರ್ಹ ಶಾಸಕ ನಾರಾಯಣಗೌಡ ಸ್ಫೋಟಕ ಹೇಳಿಕೆ

ನನ್ನ ಮುಗಿಸಲು ಸುಪಾರಿ ನೀಡಲಾಗಿದೆ ಎಂದು ಮಂಡ್ಯ ಜಿಲ್ಲೆಯ ಅನರ್ಹ ಶಾಸಕ ನಾರಾಯಣಗೌಡ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಇಂದು ಕೆ.ಆರ್.ಪೇಟೆ ತಾಲೂಕಿನ ಆಘಲಯದಲ್ಲಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾರಾಯಣಗೌಡನನ್ನು ಹೊಡೆದು ಹಾಕಬೇಕು ಎಂದು ಕೆ.ಆರ್.ಪೇಟೆಯಲ್ಲಿ 50 ಲಕ್ಷಕ್ಕೆ ಸುಪಾರಿ ನೀಡಿದ್ದರು. ಆದರೆ ಆ ಭಗವಂತನ ಶಕ್ತಿ ಎಲ್ಲಿ ಮಾಡೋಕೆ ಬಿಡುತ್ತೆ. ನಾನು ಚೆನ್ನಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ.

ದಾವೂದ್ ಮತ್ತು ಚೋಟಾ ರಾಜನ್ ವರ್ಲ್ಡ್ ಫೇಮಸ್ ಆಗಿದ್ದರು. ಅವರೇ ಹೊಡಿಯೋಕೆ ಆಗಲಿಲ್ಲ ಭಗವಂತನ ಆಶೀರ್ವಾದ ಇರುವಾಗ ನನ್ನ ತಾಲೂಕಿನಲ್ಲಿ ನನ್ನ ಹೊಡೆಯೋಕೆ ಸಾಧ್ಯವೇ? ಈ ವಿಚಾರ ತಿಳಿದ ದಿನದಿಂದ ನನ್ನ ಜೊತೆ ಗನ್ ಮ್ಯಾನ್ ಕೂಡ ಇಟ್ಟಿಕೊಂಡಿಲ್ಲ. ನಿಮ್ ಆಶೀರ್ವಾದದಿಂದ ಇರುವವರೆಗೂ ನಾನು ಯಾವತ್ತು ಭಯನು ಪಟ್ಟಿಲ್ಲ ಎಂದು ತಿಳಿಸಿದ್ದಾರೆ.

ಕೆಟ್ಟವರು ಕೆಟ್ಟವರೇ, ಈ ತಾಲೂಕಿನಲ್ಲಿ ಯಾರು ಕೆಟ್ಟವರಿದ್ದಾರೆ. ಯಾರು ಲೂಟಿ ಮಾಡುತ್ತಿದ್ದಾರೆ ಅವರಿಗೆ ಪಾಠ ಕಲಿಸೋದೇ ನನ್ನ ಮುಂದಿನ ಮುಖ್ಯ ಗುರಿ. ಅದನ್ನು ನಿಮ್ಮ ಎಲ್ಲರ ಸಹಕಾರದಿಂದ ನನ್ನ ತ್ಯಾಗ ಅನ್ಕೊಂಡಿದ್ದೀನಿ. ಹೆದರಲ್ಲ ನಾನು ಇನ್ನು ಯಾವುದೇ ಕಾರಣಕ್ಕೂ ಹೆದರೋ ಪ್ರಶ್ನೇನೆ ಇಲ್ಲ ಎಂದು ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.