ನನಗೆ ನೀವೇಲ್ಲ ನಾಮಹಾಕಿದ್ರಿ – ಕಾರ್ಯಕರ್ತರೊಬ್ಬರಿಗೆ ಸನ್ನೆ ಮಾಡಿ ತೋರಿಸಿದ ಸಿದ್ದರಾಮಯ್ಯ….

ನನಗೆ ನಿವೇಲ್ಲ ನಾಮಹಾಕಿದ್ರಿ ಅಂತ ಕಾರ್ಯಕರ್ತರೋಬ್ಬರಿಗೆ ಸನ್ನೆ ಮಾಡಿ ತೋರಿಸಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

ಹೌದು..  ಮೈಸೂರಿನ ಹುಣಸೂರಿನ ಧರ್ಮಾಪುರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ವೇದಿಕೆ ಮೇಲಿದ್ದ ಸಿದ್ದರಾಮಯ್ಯರನ್ನ ಮಾತನಾಡಿಸಲು ಆಗಮಿಸಿದ್ದ ಕಾರ್ಯಕರ್ತ ಮಾತುಕತೆ ವೇಳೆ ತನ್ನ ಚಾಮುಂಡೇಶ್ವರಿ ಸೋಲನ್ನ ನೆನಪಿಸಿಕೊಂಡ ಸಿದ್ದರಾಮಯ್ಯ ನಿಮ್ಮನ್ನ ನಂಬಿದ್ದಕ್ಕೆ ನಾಮ ಹಾಕಿದ್ರಲ್ಲ ಎಂದು ಹೇಳಿ ಸನ್ನೆ ಮಾಡಿದರು.

ವೇದಿಕೆ ಮೇಲೆಯೆ ಕಾರ್ಯಕರ್ತನನ್ನ ತರಾಟೆಗೆ ತೆಗೆದುಕೊಂಡು ಉಪಚುನಾವಣೆಯಲ್ಲಿ ಹೆಚ್‌.ಪಿ.ಮಂಜುನಾಥ್‌ರನ್ನ ಗೆಲ್ಲಿಸಿ ಕೈ ಸನ್ನೆ ಮಾಡಿ ಸೂಚನೆ ನೀಡಿದರು.

ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಸಿದ್ದರಾಮಯ್ಯ ನನಗೆ ಮಾತ್ರ ಒಳ್ಳೆಯದು ಮಾಡು ಅಂದ್ರೆ ದೇವರು ಒಳ್ಳೆಯದು ಮಾಡಲ್ಲ. ಬೇರೆಯವರಿಗೂ ಒಳ್ಳೆಯದು ಮಾಡು ಅಂತ ಕೇಳಿದ್ರೆ ದೇವರು ಒಳ್ಳೆಯದು ಮಾಡುತ್ತಾನೆ. ನಾವು ನಂಬಿಕೆ ಇಟ್ಟುಕೊಳ್ಳಬೇಕು. ಅಪನಂಬಿಕೆ ಇಟ್ಟುಕೊಳ್ಳಬಾರದು ಎಂದು ಹೇಳಿದ್ದಾರೆ.

ನಮ್ಮ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಳ್ಳುವುದೆ ದೇವರು. ಜನ ಸೇವೆ ಮಾಡುವುದೆ ದೇವರು ಎಂದು ತಿಳಿದುಕೊಳ್ಳಬೇಕು. ದೇವಾಲಯ ಮಾಡಿ ಅನಾಚಾರ ಮಾಡಬಾರದು. ಎಲ್ಲರು ಎಲ್ಲಾ‌ ಧರ್ಮವನ್ನು ಫಾಲನೆ ಮಾಡುತ್ತಾರೆ. ಎಲ್ಲಾ ಧರ್ಮಗಳು ಮನಷ್ಯನನ್ನು ಪ್ರೀತಿಸು ಅಂತನೇ ಹೇಳುತ್ತೆ. ಅದನ್ನು ಹೊರತಾಗಿ ಹೇಳಲ್ಲ.

ನಾನು ಮನಸ್ವಿನಿ, ವಿದ್ಯಾಸಿರಿ,ಅನ್ನಭಾಗ್ಯ ಎಲ್ಲಾವನ್ನು‌ ಕೊಟ್ಟೆ. ಎಲ್ಲಾ ಜಾತಿಯ ಬಡವರಿಗೆ ಕೆಲಸ ಮಾಡಿದೆ. ಆದ್ರೆ ನನ್ನನ್ನೆ ಸೋಲಿಸಿದ್ರು. ಕೆಲವರು ಹೊಟ್ಟೆ ಕಿಚ್ಚಿಗೆ ಸಿದ್ದರಾಮಯ್ಯ ಮನೆಯಿಂದ ಕೊಟ್ಟಿದ್ನಾ ಅಂತ ಕೇಳ್ತಾರೆ. ಅವರಿಗು ಅಧಿಕಾರ ಇತ್ತಲ್ಲ ಅವರು ಯಾಕೆ ಕೊಡಲಿಲ್ಲ‌. ಸಿದ್ದರಾಮಯ್ಯ ಕುರುಬರ ಪರ ಅಂತ ಕೇಲವರು ಹೇಳಿದ್ರು. ಆದ್ರೆ ಅಕ್ಕಿ ಕುರುಬರು ಮಾತ್ರ ತೆಗೆದುಕೊಳ್ತಾರಾ? ನಾನು ಎಲ್ಲಾ ಬಡವರ ಪರವಾಗಿ ಕೆಲಸಮಾಡಿದ್ದೇನೆ ಎಂದರು.

ತಳವಾರವನ್ನು ಎಸ್ಟಿಗೆ ಸೇರಿಸಲು ನಾನು ಎರಡು ಬಾರಿ ಶಿಫಾರಸು ಮಾಡಿದ್ದೆ. ಆದ್ರೆ ಈಗ ಯಾವನೋ ಬಂದು ನಾನು‌ ಮಾಡ್ದೆ ಅಂತ ಹೇಳ್ತಾನೆ. ನನ್ನ ಕೈಯಲ್ಲಿದ್ರೆ ನಾನೇ ಮಾಡಿ ಬಿಸಾಕಿ ಬಿಡುತ್ತಿದ್ದೆ. ನಾನು ಐದು ವರ್ಷ ಪೂರ್ಣ ಮಾಡ್ದೆ ಅಂತ ಕೆಲವರಿಗೆ ಹೊಟ್ಟೆಯುರಿ. ಮತ್ತೆ ಸಿಎಂ ಆಗುತ್ತೇನೆ ಅಂತ ಹೊಟ್ಟೆಯುರಿ ಪಟ್ಟಿಕೊಳ್ಳುತ್ತಾರೆ ಎಂದಿದ್ದಾರೆ.

ನನ್ನ ಕ್ಷೇತ್ರಕ್ಕಿಂತ ಹೆಚ್ಚಾಗಿ ಹುಣಸೂರಿಗೆ ಅನುದಾನ ಕೊಟ್ಟಿದ್ದೇನೆ. ಇದೀಗಾ ಉಪಚುನಾವಣೆ ಬಂದಿದೆ. ಕೆಲಸ ಮಾಡುವವರಿಗೆ ಕೂಲಿ ಕೊಡಿ. ಬುದ್ದಿವಂತಿಕೆಯಿಂದ ಮಾತನಾಡಿದ್ರು ಮತಕೊಡಬೇಡಿ ಎಂದು ಮನವಿ ಮಾಡಿಕೊಂಡರು.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.