ನಟಿ ಜಯಶ್ರೀ ಪಾಲಿಗೆ ಸ್ವಂತ ಸೋದರ ಮಾವನೇ ಈಗ ವಿಲನ್..!?

ಸ್ಯಾಂಡಲ್ ವುಡ್ ನಟಿ ಜಯಶ್ರೀ ಪಾಲಿಗೆ ಸ್ವಂತ ಸೋದರ ಮಾವನೇ ಈಗ ವಿಲನ್ ಆಗಿದ್ದಾನೆ.

ಹೌದು… ದೈಹಿಕ, ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಸ್ವಂತ ಸೋದರ ಮಾವ ಗಿರೀಶ್ ವಿರುದ್ಧ ನಟಿ ಜಯಶ್ರೀ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಯಶ್ರೀಯನ್ನ ಮನೆಯಿಂದ ಹೊರ ಹಾಕಿದ್ದಾರೆಂದು ನಟಿ ಆರೋಪ ಮಾಡಿದ್ದಾರೆ. ಕೆಲವು ವರ್ಷಗಳಿಂದ ಪ್ರಾಪರ್ಟಿ ವಿಚಾರವಾಗಿ ಮಾತುಕತೆ ನಡೆಯುತ್ತಿತ್ತು. ಹನುಮಂತ ನಗರದಲ್ಲಿ ತನ್ನ ತಾಯಿ ಜೊತೆ ವಾಸವಾಗಿದ್ದ ಜಯಶ್ರೀ, ಇದೇ ವಿಚಾರ ಮಾತನಾಡಲು‌ ಸೆ.10 ಗಿರೀಶ್ ಮನೆಗೆ ಹೋಗಿದ್ದರು. ಈ ವೇಳೆ ಗಿರೀಶ್ ಗಲಾಟೆ ಮಾಡಿ ಮನೆಯಿಂದ ನಡುರಾತ್ರಿ ಬೀದಿಗೆ ತಳ್ಳಿದ ಆರೋಪ ಮಾಡಿದ್ದಾರೆ.

ಜೊತೆಗೆ ಅಸಭ್ಯವಾಗಿಯೂ ಮಾವ ಗಿರೀಶ್ ವರ್ತನೆ ಮಾಡಿದ್ದಾರೆ ಅಂತ ದೂರಿದ್ದಾರೆ. ದೂರು ದಾಖಲಿಸಿ ಗಿರೀಶ್ ಹಾಗೂ ಜಯಶ್ರೀಗೆ ಠಾಣೆಗೆ ಹಾಜರಾಗುವಂತೆ ಸೂಚನೆ  ನೀಡಿದ್ದಾರೆ. ಪೊಲೀಸರು ಇಬ್ಬರ ವಿಚಾರಣೆ ಬಳಿಕ ಎಫ್ ಐ ಆರ್ ದಾಖಲಿಸಲು ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ನಟಿ ಜಯಶ್ರೀ ನೀಡಿದ ದೂರಿನಲ್ಲೇನಿದೆ..?

‘ನೆನ್ನೆ ತಡರಾತ್ರಿ ನಮ್ಮನ್ನ ಮನೆಯಿಂದ ಹೊರಹಾಕಿದ್ರು, ಮೊದಲಿನಿಂದ ಕಿರುಕುಳ ಕೊಡ್ತಿದ್ರು, ಮೊದಲಿನಿಂದ ಸೈಕೋ ರೀತಿ ಕಿರುಕುಳ ನೀಡ್ತಿದ್ದಾರೆ. ನನ್ನ ಬಟ್ಟೆ ಬಗ್ಗೆ ಮಾತಾಡ್ತಾನೆ.ನನ್ನ ಫ್ರೀಡಂ ನನಗೆ ಇದೆ. ನಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳ ನೀಡ್ತಿದ್ರು,  ನಮ್ ಮಾವ ಒಬ್ಬ ಹುಚ್ಚಾ ಅದಕ್ಕಾಗಿ ಇದನ್ನೆಲ್ಲ ಮಾಡ್ತಿದ್ದಾನೆ. ನನಗೆ ಹಲವು ಬಾರಿ ಶೂ ನ ಬಾಯಿಗೆ ಇಟ್ಟಿದ್ದಾರೆ.’ ಎಂದು ಆರೋಪಿಸಿದ್ದಾರೆ.

ಆರೋಪ ತಳ್ಳಿ ಹಾಕಿದ ಗಿರೀಶ್ :-

ಆದರೆ ನಟಿ ಜಯಶ್ರೀ ಆರೋಪವನ್ನು ಮಾವ ಗಿರೀಶ್ ತಳ್ಳಿ ಹಾಕಿದ್ದಾರೆ. ಫ್ರೀಡಂ ಕೊಡ್ತಿಲ್ಲ ಅಂತ ಈ ರೀತಿ ಸುಳ್ಳು ದೂರು ನೀಡಿದ್ದಾಳೆ. ಸುಮಾರು ದಿನಗಳಿಂದ ಜಯಶ್ರೀ ತನ್ನ ತಾಯಿಯ ಜೊತೆ ನಮ್ಮ‌ ಮನೆಯಲ್ಲಿಯೇ ಇರೋದು. ಯಾವಾಗ ಅಂದ್ರೆ ಅವಾಗ ಮನೆಯಿಂದ ಹೊರಗಡೆ ಹೋಗ್ತಾ ಇದ್ಳು. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಈ ರೀತಿ ಸುಳ್ಳು ಕೇಸ್ ದಾಖಲಿಸಿದ್ದಾಳೆ. ಜಯಶ್ರೀಗೆ ಕೊಡಬೇಕಾದ ಆಸ್ತಿ ಎಲ್ಲ ಈಗಾಗಲೇ ಕೊಟ್ಟಿದ್ದೇವೆ. ಬಿಗ್ ಬಾಸ್ ಗೂ ಹೋಗುವಾಗಲೂ ನಾನೇ ಜಯಶ್ರೀಗೆ ಸಹಾಯ ಮಾಡಿದ್ದು. ಫ್ರೀಡಂ ಕೊಟ್ಟಿಲ್ಲ ಅಂತ ಈ ರೀತಿ‌ ಆರೋಪ‌ ಮಾಡೋದು ಸರಿಯಲ್ಲ. ಆಸ್ತಿ ವಿಚಾರಕ್ಕೆ ಯಾವುದೇ ಜಗಳ ಮಾತುಕತೆ ಸಹ ನಡೆದಿಲ್ಲ ಎಂದಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.