ದಿನಕ್ಕೊಂದು ವಿನೂತನ ಪ್ರತಿಭಟನೆ ಹಮ್ಮಿಕೊಂಡ ಮಾಸೂರು ಗ್ರಾಮಸ್ಥರು….

ಹಿರೇಕೆರೂರು ಕ್ಷೇತ್ರಕ್ಕೆ ಉಪಚುನಾವಣೆ ಹಿನ್ನೆಲೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮಸ್ಥರು ದಿನಕ್ಕೊಂದು ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ರೈತರು, ಗ್ರಾಮಸ್ಥರು ನದಿಯಲ್ಲಿ ತೆಪ್ಪವನ್ನೇರಿ ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ ಮಾಡುವಂತೆ ಆಗ್ರಹಿಸಿ, ಕ್ಷೇತ್ರಕ್ಕೆ ಬರುವ ಜನಪ್ರತಿನಿಧಿಗಳಿಗೆ ನೂಟಾ ಮತ ಚಲಾವಣೆ, ಕಪ್ಪು ಬಟ್ಟೆ ಪ್ರದರ್ಶನ, ಘೇರಾವು ಚಳುವಳಿ ಆರಂಭಿಸಿದ್ದಾರೆ.

ಮಾಸೂರಿಂದ ಮೇದೂರು ಹೋಗುವ ರಸ್ತೆ ಕುಮದ್ವತಿ ನದಿಯಿಂದ ಜಲಾವೃತವಾಗಿದ್ದು, ಕುಮುದ್ವತಿ ನದಿ ದಾಟಿ ತಮ್ಮ ಜಮೀನಿಗೆ ತೆಪ್ಪದಲ್ಲಿ ತೆರಳಲು ರೈತರ ಹರಸಾಹಸ ಪಡಬೇಕು. ಮಾಸೂರು,ಮೇದೂರು,ಯತ್ತಿ‌ನಹಳ್ಳಿ ಗ್ರಾಮಸ್ಥರು ಜೀವದ ಹಂಗು ತೊರೆದು ನದಿ ತಾಟುತ್ತಿದ್ದಾರೆ.

ಗ್ರಾಮಸ್ಥರ ಮನವಿ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಕೂಗಿತ್ತಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.