ತಮ್ಮನ್ನು ಕಾಪಾಡಿದ ಸೈನಿಕರಿಗೆ ರಾಕಿ ಕಟ್ಟಿ ಬೀಳ್ಕೊಟ್ಟ ಆಲೇಖಾನ್ ಸಂತ್ರಸ್ಥರು….

ಚಿಕ್ಕಮಗಳೂರು ಮಹಾಮಳೆಗೆ ಸಿಲುಕಿ ಅತಂತ್ರರಾಗಿದ್ದವರನ್ನು‌ ರಕ್ಷಿಸಲು‌ ಬಂದ ಸೇನಾಪಡೆ ವಾಪಸ್ ಆಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಿಂದ ಎರಡು ಬ್ಯಾಚ್ ನಲ್ಲಿದ್ದ 40 ಜನರು ಸೈನಿಕರು ಹಿಂತಿರುಗಿದ್ದಾರೆ.

ಆಲೇಖಾನ್ ಹೊರಟ್ಟಿ ಹಾಗೂ ದುರ್ಗದಹಳ್ಳಿಯಲ್ಲಿ‌ ಐದು ದಿನಗಳಿಂದ ಗುಡ್ಡ ಕುಸಿತದಲ್ಲಿ ಸಿಲುಕಿದ್ದ 100 ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಸೇನಾಪಡೆ ರಕ್ಷಣಾ ಕಾರ್ಯ ಇಂದಿಗೆ ಮುಕ್ತಾಯಗೊಂಡಿದೆ.

ಕ್ಯಾಪ್ಟನ್ ಮಲ್ಲಿಕಾರ್ಜುನ್ ನೇತೃತ್ವದಲ್ಲಿ‌ ಕಾರ್ಯಾಚರಣೆ ನಡೆಸಿದ್ದ ಸೇಮಾಪಡೆ ಯೋಧರಿಗೆ ಆಲೇಖಾನ್ ಗ್ರಾಮಸ್ಥರು ರಾಕಿ ಕಟ್ಟಿ ಸೈನಿಕರಿಗೆ ಧನ್ಯವಾದ ತಿಳಿಸಿದ್ದಾರೆ.

ತಮ್ಮನ್ನು ಕಾಪಾಡಿದ ಯೋಧರು ವಾಪಸ್ ತೆರಳುವ ವೇಳೆ ಮಹಿಳೆಯರು ಕಣ್ಣೀರು ಹಾಕಿದರು. ಕಣ್ಣೀರು ಹಾಕುತ್ತಲೇ ಯೋಧರನ್ನು ಕಳುಹಿಸಿಕೊಟ್ಟ ಮೂಡಿಗೆರೆ ಜನತೆ ಕಂಡು ಮನದಲ್ಲೆ ಸೇನಾಪಡೆ ಮರುಗಿದ ದೃಶ್ಯಗಳು ಕಣ್ಣಂಚನ್ನು ಒದ್ದೆ ಮಾಡುತ್ತವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.