ಡಿಕೆಶಿ ಬಂಧನ, ಬಸವರಾಜ ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್….

ಕಾನೂನು ಪ್ರಕಾರ ಡಿಕೆಶಿ ಬಂಧನ-ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಬಸವರಾಜ ಬೊಮ್ಮಾಯಿ ಯಾವಾಗ ಲಾಯರ್ ಕೆಲ್ಸ ಮಾಡಿದ್ದಾರೆ ನಂಗೆ ಗೊತ್ತಿಲ್ಲ. ಬೇಲ್ ಯಾವಾಗ ಕೊಡ್ಬೇಕು,ಯಾವಾಗ ಕೊಡ್ಬಾರ್ದು ಅನ್ನೋದು ಕಾನೂನಿನಲ್ಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆಗೆ ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ನಾಲ್ಕು ದಿನ ವಿಚಾರಣೆಗೆ ಹೋಗಿ ,ಸಮನ್ಸ್ ಗೆ ಗೌರವ ಕೊಟ್ಟು ಹಾಜರಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಡಿಕೆಶಿಗೆ ಬೇಲ್ ಕೊಡ್ಬೇಕಾಗಿತ್ತು ,ಯಾಕೆ ಕೊಡ್ಲಿಲ್ಲ..!? ಅರೆಸ್ಟ್ ಮಾಡೋದೆ ಪರಿಹಾರವಲ್ಲ. ಅರೆಸ್ಟ್ ಯಾವಾಗ ಮಾಡ್ಬೇಕು..?

ಸಾಕ್ಷಿ ನಾಶ ಮಾಡಿಬಿಡ್ತಾರೆ,ಸಾಕ್ಷಿ ಕೊಂಡುಕೊಂಡಬಿಡ್ತಾರೆ ಕೆಲ್ಸ ಸಿಗಲ್ಲ ಅಂದಾಗ ಅರೆಸ್ಟ್ ಮಾಡ್ಬೇಕು. ಇವುಗಳ ಮಧ್ಯೆ ನಾಲ್ಕು ದಿನ ಹಾಜರಾಗಿ ಉತ್ತರ ಕೊಟ್ಟಾಗ ಅರೆಸ್ಟ್ ಮಾಡೋದು ಏನಿತ್ತು!? ಕಸ್ಟೋಡಿಯನ್ ತಗೊಂಡು ವಿನ್ವಿಸ್ಟಿಗೇಶನ್ ಮಾಡೋ ಅಗತ್ಯವೇನಿತ್ತು.

ಅದು ಪೊಲಿಟಿಕಲ್ ಮೋಟಿವೇಟೆಡ್. ಇದು ಸೇಡಿನಿಂದ ಮಾಡಿರೋ ಕ್ರಮ. ಬಿಎಸ್ವೈ ಸೇರಿದಂತೆ ಹಲವರು ಜೈಲಿಗೆ ಹೋಗಿದ್ರು ಅವ್ರು ಉಪ್ಪು ತಿಂದಿದ್ರಾ ಅನ್ನೋ ವಿಚಾರ. ಈ ಬಗ್ಗೆ ಅವರನ್ನೇ ಕೇಳಿ.

ಬಿಎಸ್ವೈ,ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೈಲಿಗೆ ಹೋಗಿದ್ರು. ಅವ್ರು ಉಪ್ಪು ತಿಂದಿದ್ರಾ!? ತಪ್ಪಿತಸ್ಥ ಅಂತ ಸಾಬೀತಾಗುವರೆಗೂ ಅವ್ರು ಇನ್ನೋಸೆಂಟ್ . ಕಾನೂನು ಏನು ಹೇಳುತ್ತೆ. ಅನ್ ಲೆಸ್ ಗಿಲ್ಟ್ ಇಸ್ ಪ್ರೂವ್ಡ್ ಇಸ್ ಇನ್ನೋಸೆಂಟ್ ಅಂತ ಹೇಳುತ್ತೆ.

ಎವರೀ ಅಕ್ಯೂಸ್ಡ್ ಇಸ್ ಎ ಇನ್ನೋಸೆಂಟ್. ಆಮೇಲೆ ತಪ್ಪಿತಸ್ಥ ಅಂತ ಪ್ರೂವ್ ಆದ್ಮೇಲೆ ಶಿಕ್ಷೆ ಮಾಡೋದು ಅಲ್ವಾ..!? ಅದನ್ನು ಮುಂಚಿತವಾಗಿ ಮಾಡಿದ್ರೆ ಹೇಗೆ!?

ನಾನು ಲಾಯರ್ ಆಗಿದ್ದವ ಹೇಳ್ತಾಯಿದ್ದೀನಿ. ಡಿಕೆಶಿ ಮೇಲೆ ಐಟಿ ದಾಳಿ ಮಾಡಿದ್ರು,ಅದಕ್ಕೆ ನಾವೇನು ಕಾನೂನು ವಿರುದ್ಧವಿಲ್ಲ. ಡಿಕೆಶಿ ಇಡಿಯಿಂದ ಬಂಧನಕ್ಕೆ ಸಿದ್ದರಾಮಯ್ಯ ಕಿಡಿ. ಶ್ರೀನಿವಾಸ ಗೌಡ ಅಸೆಂಬ್ಲಿಯಲ್ಲಿ ಬಿಜೆಪಿಯವ್ರು(ಅಶ್ವಥ್ ನಾರಾಯಣ) ನನಗೆ ಐದು ಕೋಟಿ ಹಣ ತಂದು ಕೊಟ್ಟಿದ್ರು ಅಂತ ಹೇಳಿದ್ರು.

ಅದನ್ನು ಯಾಕೆ ಎನಿಕ್ವೈರ್ ಮಾಡ್ಲಿಲ್ಲ. ಅಶ್ವಥ್ ನಾರಾಯಣ, ವಿಶ್ವನಾಥ್ ಇವರನ್ನೆಲ್ಲಾ ಯಾಕೆ ಎನಿಕ್ವೈರಿ ಮಾಡ್ಲಿಲ್ಲ. ಆಡಿಯೋ ಕೂಡಾ ಇತ್ತು ಎನಿಕ್ವೈರಿ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.