ಜಮ್ಮು- ಕಾಶ್ಮೀರದಲ್ಲಿ ಹುಬ್ಬಳ್ಳಿಯ ಯೋಧ ನಿಧನ ಪ್ರಕರಣಕ್ಕೆ ಟ್ವಿಸ್ಟ್…

ಜಮ್ಮು- ಕಾಶ್ಮೀರದಲ್ಲಿ ಹುಬ್ಬಳ್ಳಿಯ ಯೋಧ ನಿಧನ ಹೊಂದಿದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.

ಹೌದು…  ಹತ್ತು ವರ್ಷಗಳಿಂದ ಯೋಧನಾಗಿ ದೇಶಸೇವೆ ಸಲ್ಲಿಸುತ್ತಿದ್ದ,  ಮಂಜುನಾಥ್ ಓಲೇಕಾರ್ (29) ಮೃತ ಯೋಧ, ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

19ನೆಯ ಮದ್ರಾಸ್ ರೆಜಿಮೆಂಟ್‌ನ ಯೋಧ ಓಲೇಕಾರ್ ಪಾರ್ಥೀವ ಶರೀರ ಸ್ವಗ್ರಾಮ ಹುಬ್ಬಳ್ಳಿ ಇನಾಮ್‌ ವೀರಾಪುರಕ್ಕೆ ಆಗಮಿಸಿದೆ. ಮೃತ ಯೋಧನ ಊರಲ್ಲಿ ಮಡುಗಟ್ಟಿದ ಶೋಕ, ಕುಟುಂಬಸ್ಥರ ಆಕ್ರಂಧನ ಮುಗಿಲುಮುಟ್ಟಿದೆ.

ಓಲೇಕಾರ್ ಕೆಲವು ತಿಂಗಳುಗಳ ಹಿಂದೆ ಮದುವೆಯಾಗಿದ್ದರು, ಇನ್ನೂ ಒಂದು ತಿಂಗಳಲ್ಲಿ ಪತ್ನಿಯ ಸೀಮಂತ ಕಾರ್ಯ ಕೂಡ ಇತ್ತು. ಆದರೆ ಏಕಾಏಕಿ ಯಾಕೆ ಹೀಗೆ ಆತ್ಮಹತ್ಯೆ ಮಾಡಿಕೊಂಡರು ಅನ್ನೋ ವಿಚಾರ ಮಾತ್ರ ತಿಳಿದು ಬಂದಿಲ್ಲ. ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಇನ್ನಿತರ ಕಾರಣಗಳಿಂದ ಾತ್ಮಹತ್ಯೆ ಮಾಡಿಕೊಂಡರೋ ಅನ್ನೋ ವಿಚಾರ ವಿಚಾರಣೆ ಬಳಿಕ ಮಾತ್ರ ತಿಳಿಯಲಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.