ಚುನಾವಣೆಯಲ್ಲಿ ಜನರೊಂದಿಗೆ ಇರುತ್ತೇನೆಂದಿದ್ದ ದರ್ಶನ್, ಯಶ್ ಗೆ ಶಿವರಾಮೇಗೌಡ ಟಾಂಗ್….

ಉಪ ಚುನಾವಣೆ ಹೊಸ್ತಿಲ್ಲಲ್ಲ ಮತ್ತೆ ಮಂಡ್ಯದಲ್ಲಿ‌ ಮುನ್ನೆಲೆಗೆ ಜೋಡೆತ್ತು ಹೆಸರು ಕೇಳಿಬಂದಿದೆ.

ಹೌದು..  ಜಿಲ್ಲೆಯ ರೈತರ ಕಣ್ಣೀರು ಒರೆಸಲು ಈಗ ಜೋಡೆತ್ತು ಬರಲಿವೆಯೇ..? ಚುನಾವಣೆಯಲ್ಲಿ ಜನರೊಂದಿಗೆ ಇರುತ್ತೇನೆಂದಿದ್ದ ದರ್ಶನ್, ಯಶ್ ಗೆ ಮಂಡ್ಯದ ನಾಗಮಂಗಲದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಕೊಟ್ಟಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಕೈ ಬಿಡಬೇಡಿ ಅಂತಾ ಹೇಳಿದ್ವಿ. ಒಂದು ವರ್ಗದ ಜನ ಸ್ವಾಭಿಮಾನಕ್ಕೆ ಮತ ಕೊಡ್ಬೇಕು ಎಂದು ಸುಮಲತಾರನ್ನ ಗೆಲ್ಲಿಸಿದ್ರು. ರೈತರ ಕಬ್ಬು ಕಟಾವಾಗದೆ ಬೆಂಕಿ ಹಚ್ಚುವ ಸ್ಥಿತಿಗೆ ಬಂದಿದೆ.

ಚುನಾವಣೆಯಲ್ಲಿ ಮಂಡ್ಯದ ಉದ್ದಗಲಕ್ಕೆ ಜೋಡೆತ್ತು ಬಂದಿದ್ದೋ ಈಗ ನಾಪತ್ತೆಯಾಗಿವೆ. ಮಂಡ್ಯ ಜನರಿಗೆ ನಾವಿದ್ದೀವಿ, ನಿಮ್ಮನ್ನ ನೋಡ್ಕೊತೀವಿ ಅಂತೇಳಿದ್ರು.ಈಗ ಸಂಸದರನ್ನ ಕರೆದುಕೊಂಡು ಬಂದು ರೈತರ ಸಮಸ್ಯೆ ಪರಿಹಾರಕ್ಕೆ ಹೋರಾಟಕ್ಕಿಳಿಯಲಿ ಎಂದು ಚುನಾವಣೆಯಲ್ಲಿ ಜನರೊಂದಿಗೆ ಇರುತ್ತೇನೆಂದಿದ್ದ ದರ್ಶನ್, ಯಶ್ ಗೆ ಶಿವರಾಮೇಗೌಡ ಟಾಂಗ್ ಕೊಟ್ಟಿದ್ದಾರೆ.

ಜಿಲ್ಲೆಯ ಜನ ಸ್ವಾಭಿಮಾನದ ಮೇಲೆ ವೋಟ್ ಕೊಟ್ಟಿದ್ದಾರೆ. ಸಮಸ್ಯೆ ಪರಿಹಾರಕ್ಕೆ ನಿತ್ಯ ಸುಮಲತಾ ಮಂಡ್ಯದಲ್ಲಿರ್ತಾರೆ ಅಂದುಕೊಂಡಿದ್ವಿ. ರೈತ್ರು ಸತ್ರು ಇಲ್ಲ, ಬಾಯಿ ಬಡೆದುಕೊಂಡ್ರು ಈಗ ಸಂಸದರು ಬರ್ತಿಲ್ಲ. ಜೋಡೆತ್ತು, ಸಂಸದ್ರನ್ನ ಹುಡುಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಮಲತಾ ರಾಜಕೀಯ ಸಾಕು, ಸಮಸ್ಯೆ ಬಗೆ ಹರಿಸೋಣ ಎಂದಿದ್ರು. ಈಗ ಬನ್ನಿ, ರೈತರ ಸಮಸ್ಯೆ ಬಗೆ ಹರಿಸೋಣ,ನೀವು ಮುಂದೆ ನಡೆಯಿರಿ ನಾವು ಹಿಂದೆ ಬರ್ತೀವಿ. ಆವಗ ಬಂದಿದ್ದ ಜೋಡೆತ್ತು ದರ್ಶನ್, ಯಶ್ ಈಗ ಅಡ್ರೆಸ್ ಇಲ್ಲ. ಡಿಸಿ ಕಚೇರಿ ಮುಂದೆ ಧರಣಿ ಕುಳಿತು, ರೈತರ ಸಮಸ್ಯೆಗೆ ದನಿಗೂಡಿಸಲಿ.ರೈತನಾಯಕ ಪುಟ್ಟಣ್ಣಯ್ಯಗೆ ಒಳ್ಳೆಯ ಹೆಸರಿತ್ತು. ಸುನಿತಾ ಪುಟ್ಟಣ್ಣಯ್ಯ ಚುನಾವಣೆಯಲ್ಲಿ ಹೋರಾಟ ಮಾಡಿದ್ರು. ಈಗ ರೈತರ ಸಮಸ್ಯೆ ನಿವಾರಣೆಗೆ ಸಂಸದರನ್ನು ಹೋರಾಟಕ್ಕೆ ಕರಿಯಿರಿ. ನಾವು ಯಾವತ್ತು ಬೇಕಾದ್ರೂ ಹೋರಾಟಕ್ಕೆ ಬರ್ತೀವಿ.

ಚುನಾವಣೆಯಲ್ಲಿ ಸುಮಲತಾ ಬೆಂಬಲಿಸಿದವರಿಗೆ ಈಗ ರೈತರ ಸಮಸ್ಯೆಗಾಗಿ ಹೋರಾಡಲು ಶಿವರಾಮೇಗೌಡ ಟಾಂಗ್ ಕೊಟ್ಟು ಮನವಿ ಮಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.