ಚಿಕ್ಕೋಡಿಯಲ್ಲಿ ಕೃಷ್ಣಾನದಿ ಪ್ರವಾಹ ಸಂತ್ರಸ್ತರಿಂದ ಪ್ರತಿಭಟನೆ

ಬೆಳಗಾವಿಯ ಚಿಕ್ಕೋಡಿ ಕೃಷ್ಣಾನದಿ ಪ್ರವಾಹ ಸಂತ್ರಸ್ತರು ಪ್ರತಿಭಟನೆ ನಡೆಸಿದ್ದಾರೆ.

ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುತ್ತಿದೆ.  ಮಕ್ಕಳು, ಮಹಿಳೆಯರು, ವೃದ್ದರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಪ್ರವಾಹದಿಂದಾಗಿ ಭಾಗಶಃ ಮುಳುಗಿರುವ ಸತ್ತಿ ಗ್ರಾಮದಲ್ಲಿ  ಹೊಲ-ಗದ್ದೆ, ಜಾನುವಾರ. ಮನೆಗಳನ್ನ ಕಳೆದುಕೊಂಡ ನಿರಾಶ್ರಿತರು ಅಧಿಕಾರಿಗಳು ತಮಗೆ ಶಾಸ್ವತ ನೆಲೆ ಕೊಡುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದಾರೆ.

250 ಮನೆಗಳು ಮುಳುಗಡೆಯಾಗಿದ್ದರೂ ಸರಕಾರದಿಂದ ಪರಿಹಾರ ನೀಡಿಲ್ಲ ಎಂದು ಆರೋಪ‌ ಮಾಡಿದ್ದಾರೆ. ಜೊತೆಗೆ ಮನೆಗಳು ಜಲಾವೃತವಾದರು ಮುಳುಗಡೆ ಪ್ರದೇಶ ಎಂದು ಘೋಷಣೆ ಮಾಡದೆ ನಿರ್ಲಕ್ಷ ತೋರಿತ್ತಿದ್ದಾರೆಂದು ಆರೋಪಿಸಿದ್ದಾರೆ.

ತಕ್ಷಣವೇ ಮುಳುಗಡೆ ಘೋಷಣೆಗೆ ಹಾಗೂ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಮಕ್ಕಳು, ಮಹಿಳೆಯರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.