ಚರಂಡಿ ನೀರಿನಲ್ಲಿ ಯುವಕನ ಹುಚ್ಚಾಟದ ವಿಡಿಯೋ ವೈರಲ್ – ಇದು ಪಬ್‌ಜೀ ಎಫೆಕ್ಟಾ?

ನಿಂತ ಚರಂಡಿ ನೀರಿನಲ್ಲಿ ಯುವಕನೊಬ್ಬ ಬಿದ್ದು ಒದ್ದಾಡುತ್ತ ಜಿಗಿದಾಡಿದ ವಿಡಿಯೋ ವೈರಲ್ ಆಗಿದೆ.

ವಿಜಯಪುರ ನಗರದಲ್ಲಿ ಈ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಈ ಯುವಕ ಪಬ್‌ ಜಿ ಗೇಮ್‌ಗಾಗಿ ಈ ರೀತಿ ಮಾಡಿದ್ದಾನೆ ಎಂದು ಕೆಲವರು ಈ ವಿಡಿಯೋಗೆ ಹಿನ್ನೆಲೆ ಧ್ವನಿ ಸೇರಿಸಿ ವಾಟ್ಸಪ್‌ನಲ್ಲಿ ಹರಿ ಬಿಟ್ಟಿದ್ದಾರೆ.

ಆದರೆ, ಮತ್ತೆ ಕೆಲವರು ಈ ಯುವಕ ಗಾಂಜಾ, ಇಲ್ಲವೆ ಇದ ಮಾದಕ ಚಟದ ವ್ಯಸನಿಯಾಗಿದ್ದು, ಮದವೇರಿದ ಮೇಲೆ ಈ ರೀತಿ ಕಂದಕದ ಚರಂಡಿ ನೀಡಿನಲ್ಲಿ ಮುಳುಗಿ ಏಳುತ್ತ ಜಿಗಿದಾಡಿದ್ದಾನೆ ಎಂದೂ ಕಮೆಂಟ್ ಮಾಡಿದ್ದಾರೆ.
ಒಟ್ಟಾರೆ ಈ ವಿಜಿಯೋ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ವೈರಲ್ ಆಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.