ಚನ್ನಪಟ್ಟಣದಲ್ಲಿ ಗ್ರಾಮ ಲೆಕ್ಕಿಗನಿಗೆ ಬಿಗ್ ಶಾಕ್ ಕೊಟ್ಟ ನಕಲಿ IAS ಅಧಿಕಾರಿ ಅರೆಸ್ಟ್….!

ಬೆಳಕೆರೆ ಗ್ರಾಮದ ಗೋಮಾಳ ಜಮೀನಿನ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿ ನಕಲಿ IAS ಅಧಿಕಾರಿ ಅರೆಸ್ಟ್ ಆಗಿದ್ದಾನೆ.

ಹೌದು.. ಎಸ್.ಮಹಮ್ಮದ್ ಸಲ್ಮಾನ್ ಬಂಧಿತ ಆರೋಪಿ. ಗೋಮಾಳ ಜಮೀನಿನ ವಿಚಾರವಾಗಿ ಗ್ರಾಮ ಲೆಕ್ಕಿಗನಿಗೆ IAS ಅಧಿಕಾರಿ ಎಂದು ಕರೆಮಾಡಿದ್ದ ಆರೋಪಿ, ಈ ವಿಚಾರವಾಗಿ ಮಾತನಾಡಬೇಕೆಂದು ಪಟ್ಟಣದ ಪ್ರವಾಸಿ ಮಂದಿರಕ್ಕೆ ಗ್ರಾಮಲೆಕ್ಕಿಗನನ್ನ ಕರೆಸಿದ್ದಾನೆ.

ಈ ವೇಳೆ ಆಕಸ್ಮಿಕವಾಗಿ ಸ್ಥಳಕ್ಕೆ ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್ ಆಗಮಿಸಿದ್ದಾರೆ. ತಹಶೀಲ್ದಾರ್ ನಿಮ್ಮದು ಯಾವ ಬ್ಯಾಚ್ ಎಂದು ವಿಚಾರಿಸಿದಾಗ ಆರೋಪಿ ತಬ್ಬಿಬ್ಬಾಗಿದ್ದಾನೆ. ಭಯದಲ್ಲಿದ್ದ ಆರೋಪಿ ನಕಲಿ ಎಂದು ತಿಳಿದು, ಆತನ ವಿರುದ್ಧ ದೂರು ನೀಡಲಾಗಿದೆ. ನಂತರ ಚನ್ನಪಟ್ಟಣ ಟೌನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ವಿಧಾನಸೌಧದಲ್ಲಿ ಆರೋಪಿ IAS ಅಧಿಕಾರಿ ಎಂದು ಹೇಳಿಕೊಂಡಿದ್ದು ಗಮನಕ್ಕೆ ಬಂದಿದೆ.  ಎರಡು ದಿನದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಆರೋಪಿಯನ್ನು ವಶಕ್ಕೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.