ಚಕ್ರವರ್ತಿ ಸೂಲಿಬೆಲೆ ಎಲ್ಲಿದೀಯಪ್ಪ? ಎಲ್ಲಿದಿಯಪ್ಪ ನೀನು? ನೆರೆಪೀಡಿತ ಪ್ರದೇಶದ ಯುವಕನಿಂದ ಲೇವಡಿ..

ನೆರೆಪೀಡಿತ ಪ್ರದೇಶದ ಯುವಕನಿಂದ ಚಕ್ರವರ್ತಿ ಸೂಲಿಬೆಲೆಗೆ ಪಂಥಾಹ್ವಾನ ಮಾಡಲಾಗಿದೆ.

ನೆರೆಪೀಡಿತ ಬಾಗಲಕೋಟೆಯ ಚಿಮ್ಮಲಗಿ ಗ್ರಾಮದ ಮಲ್ಲು ಹುನಗುಂಡಿ ಎಂಬಾ ಯುವಕ ಚಕ್ರವರ್ತಿ ಸೂಲಿಬೆಲೆ ಎಲ್ಲಿದೀಯಪ್ಪ..? ಎಲ್ಲಿದಿಯಪ್ಪ ನೀನು ಎಂದು ಲೇವಡಿ ಮಾಡಿದ್ದಾನೆ. ಜಮೀನಿನಲ್ಲಿ ನಿಂತು ಯುವಕ ಚಕ್ರವರ್ತಿ ಸೂಲಿಬೆಲೆಗೆ ಪಂಥಾಹ್ವಾನದ ವಿಡಿಯೋ ಹರಿಬಿಟ್ಟಿದ್ದಾನೆ.

ಚಕ್ರವರ್ತಿ ಸೂಲಿಬೆಲೆ ಉತ್ತರ ಕರ್ನಾಟಕ ಪ್ರವಾಹ ನೆರವಿಗೆ ರಾಜ್ಯ , ಕೇಂದ್ರ ಸರ್ಕಾರದ ಗಮನಕ್ಕೆ ತರ್ತಿನಿ ಅಂದಿದ್ರು. ಚಕ್ರವರ್ತಿ ಸೂಲಿಬೆಲೆ ಪ್ರವಾಹ ಪ್ರದೇಶಕ್ಕೆ ಬಂದು ಹೋಗಿ ಇವತ್ತಿಗೆ 51ದಿನವಾಗಿದೆ. ಚಕ್ರವರ್ತಿ ಸೂಲಿಬೆಲೆ ನಾಪತ್ತೆಯಾಗಿದ್ದಾರೆ, ಹುಡುಕಿಕೊಡಿ. ಚುನಾವಣೆ ಬಂದಾಗ ಸೂಲಿಬೆಲೆ ಬರ್ತಾನೆ, ಮತ್ತೆ ಐದು ವರ್ಷ ನಾಪತ್ತೆಯಾಗ್ತಾನೆ.

ಐದು ವರ್ಷಕ್ಕೆ ಚುನಾವಣೆ ಬಂದಾಗ ಮತ್ತೆ ಬಂದು ಕಳ್ಳರು,ಸುಳ್ಳರ ಪರ ಪ್ರಚಾರ ಮಾಡಿ ಅಧಿಕಾರಕ್ಕೆ ತರ್ತಾನೆ. ಅಧಿಕಾರಕ್ಕೆ ತಂದು ಸತ್ತುಹೋಗ್ಬಿಡ್ತಾನೆ,ಮತ್ತೆ ಚುನಾವಣೆ ಬಂದಾಗ ಹುಟ್ಟಿಬಿಡ್ತಾನೆ. ಚಕ್ರವರ್ತಿ ಸೂಲಿಬೆಲೆ ಮೂಡನಂಬಿಕೆ ಸೃಷ್ಟಿಕರ್ತ. ಆತನನ್ನು ನಂಬಿ ದೇಶ,ರಾಜ್ಯ ಹಾಳಾಗಿ ಹೋಯಿತು. ಚಕ್ರವರ್ತಿ ಸೂಲಿಬೆಲೆ ಕೊರಳಪಟ್ಟಿ ಹಿಡಿದು ಕೇಳ್ಬೇಕು. ನೆರೆ ಪೀಡಿತರು ಜಮೀನಿನಲ್ಲಿ ಬದುಕುತ್ತಿದ್ದಾರೆ,ರೈತರಿಗೆ ಒಂದೇ ಒಂದು ಪರಿಹಾರ ಬಂದಿಲ್ಲ.

ಕೇಂದ್ರದಿಂದ ಒಂದೇ ಒಂದು ಪೈಸೆ ಪರಿಹಾರ ಬಿಡುಗಡೆಯಾಗಿಲ್ಲ. ನೀನು ಐದು ವರ್ಷಕ್ಕೊಮ್ಮೆ ಹುಟ್ಟುವಂತಹ ಮನುಷ್ಯ. ಆಶ್ವಾಸನೆಯಿಂದ ಮನುಷ್ಯ ಬದುಕೋದಿಲ್ಲ, ಆತ್ಮವಿಶ್ವಾಸದಿಂದ ಮನುಷ್ಯ ಬದುಕುತ್ತಾನೆ. ಆಸೆ ಹಚ್ಚಿ ನೀವು ಜನ್ರನ್ನು ಸಾಯಿಹೊಡಿತ್ತಿದ್ದೀರಿ. ಸೂಲಿಬೆಲೆ ನಿಮ್ಮ ನಾಲಿಗೆಯಲ್ಲಿ ನಿಜವಾದ ನಿಯತ್ತು ಇದ್ರೆ..ನೀವೂ ಮಾತನಾಡುವುದು ಸತ್ಯವಾಗಿದ್ರೆ.

ನೀವೂ ಮೊದಲು ಕೇಂದ್ರ,ರಾಜ್ಯ ಸರ್ಕಾರದ ಜೊತೆಗೆ ಮಾತನಾಡಿ. ನಿಮಗೆ ಎಷ್ಟೆಷ್ಟು ಲಿಂಕ್ ಇದೆಯೋ ಗೊತ್ತಿಲ್ಲ. ನೀವೂ ಚುನಾವಣೆ ಸಂದರ್ಭದಲ್ಲಿ ಟೀಮ್ ಮೋದಿ ಎಂದು ಮಾಡಿಕೊಂಡು ಬಂದಾಗ. 25ಜನ ಸಂಸದರನ್ನು ಆಯ್ಕೆ ಮಾಡಿಕಳುಹಿ‌ಸಿದ್ದೀವಿ. ಯಾವ ಸಂಸದರು ಕರ್ನಾಟಕದ ಬಗ್ಗೆ ದನಿಯೆತ್ತುತ್ತಿಲ್ಲ ಎಂದು ಹರಿಹಾಯ್ದಿದ್ದಾನೆ.

ಕಳ್ಳತನದ ಮಾರುವೇಷದಲ್ಲಿ ಬರುವವನೆ ಚಕ್ರವರ್ತಿ ಸೂಲಿಬೆಲೆ. ಸುಳ್ಳು ಹೇಳುವರ ಕಡೆ ಜನ ಹೋಗ್ತಾರೆ,ಸತ್ಯಹೇಳುವರ ಕಡೆ ಹೋಗಲ್ಲ. ಇದಕ್ಕೆ ಚಕ್ರವರ್ತಿ ಸೂಲಿಬೆಲೆ ಸ್ಪಷ್ಟವಾದ ಕಾರಣ. ಒಂದೇ ವೇದಿಕೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಚರ್ಚೆಗೆ ಪಂಥಾಹ್ವಾನ ನೀಡಿದ ಯುವಕ, ನಿನ್ನ ಪ್ರಶ್ನೆಗೆ ನಾನು ಉತ್ತರ ಕೊಡುತ್ತೇನೆ. ನನ್ನ ಪ್ರಶ್ನೆಗೆ ನೀ ಉತ್ತರ ಕೊಡು. ಚಕ್ರವರ್ತಿ ಸೂಲಿಬೆಲೆಗೆ ಸವಾಲಾಕಿದ್ದಾನೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.