ಗೋವುಗಳಿಗೆ ರಾಖಿ ಕಟ್ಟಲು ನಿರ್ಧರಿಸಿದ ಬಿಜೆಪಿ ಶಾಸಕ…!

ಶ್ರಾವಣ ಮಾಸದ ಪೂರ್ಣ ಚಂದಿರನ ದಿವಸ ಜರುಗಲಿರುವ ರಕ್ಷಾ ಬಂಧನ ಸಹೋದರ-ಸಹೋದರಿಯರ ಪವಿತ್ರ ಸಂಬಂಧದ ಸಂದೇಶ ಸಾರಲಿದೆ.

ಇದರ ನಿಮಿತ್ತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಆಪ್ತ ಹಾಗೂ ಬಿಜೆಪಿ ಶಾಸಕ ಭುಕ್ಕಲ್‌ ನವಾಬ್‌ ಗೋವುಗಳಿಗೆ ರಾಖಿ ಕಟ್ಟಲು ನಿರ್ಧರಿಸಿದ್ದಾರೆ. ಲಖನೌನ ಕುಬಿಯಾಘಾಟ್‌ನಲ್ಲಿ ಹಮ್ಮಿಕೊಳ್ಳಲಾಗುವ ವಿಶೇಷ ಕಾರ್ಯಕ್ರಮದಲ್ಲಿ ದೊಡ್ಡ ಮಟ್ಟದಲ್ಲಿ ಜನರು ಭಾಗಿಯಾಗುವ ನಿರೀಕ್ಷೆಯಿದೆ.

ರಕ್ಷಾ ಬಂಧನದ ದಿನ ಗೋಪೂಜೆ ಮಾಡಿ ನಂತರ ರಾಖಿ ಕಟ್ಟಲಿದ್ದೇವೆ ಎಂದು ನವಾಬ್‌ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.