ಗಾಳಿ, ಬೆಳಕು, ನೀರು ಇಲ್ಲದ ಸ್ಥಳದಲ್ಲಿ ೧೧ ದಿನ ಯೋಗಸಮಾದಿ ಪೂರ್ಣಗೊಳಿಸಿದ ಸ್ವಾಮೀಜಿ…

ಕೆಲವರು ಕಠಿಣ ವಾದ ವೃತಗಳನ್ನು ಮಾಡುವ ರೂಢಿ ಮಾಡಿಕೊಂಡಿರುತ್ತಾರೆ, ಅದರಲ್ಲಿ ಯೋಗ ಸಮಾದಿ ವೃತವು ತೀರಾ ಕಠಿಣವಾಗಿದ್ದು, ದೇವಸ್ಥಾನದ ಗಾಳಿ, ಬೆಳಕು, ನೀರು ಇಲ್ಲದ ಸ್ಥಳದಲ್ಲಿ ಸ್ವಾಮೀಜಿಯೊಬ್ಬರು ೧೧ ದಿನ ಯೋಗಸಮಾದಿ ಪೂರ್ಣಗೊಳಿಸಿ ಇಂದು ಹೊರ ಬಂದಿದ್ದಾರೆ, ಯಾರು ಈ ಸ್ವಾಮೀಜಿ ಎಲ್ಲಿ ಎಂಬುವುದಕ್ಕೆ ಈ‌ ವರದಿ ನೋಡಿ..

ಸ್ವಾಮೀಜಿ ಒಬ್ಬರು ೧೧ ದಿನಗಳ ಕಾಲ ಸಮಾದಿಯಂತೆ ಇರುವ ಸ್ಥಳದಲ್ಲಿ ಯೋಗ ಮಾಡಿ ಹೊರಬಂದಿದ್ದಾರೆ, ಇದು ನಡೆದಿದ್ದು ರಾಯಚೂರು ಜಿಲ್ಲೆಯ ಪುಣ್ಯ ಕ್ಷೇತ್ರವಾಗಿರುವ ಗುರಗುಂಟಾದ ಅಮರೇಶ್ವರ ದಲ್ಲಿ, ಅಮರೇಶ್ವರ ದೇವಸ್ಥಾನದಲ್ಲಿ ಗದಗ ಜಿಲ್ಲೆಯ‌ ಅಂತೂರು ಬೆಂತೂರಿನ ಶ್ರೀ ರಾಚೋಟೇಶ್ವರ ಸ್ವಾಮೀಜಿಯವರು ಯೋಗ ಸಮಾದಿ ಪೂರ್ಣಗೊಳಿಸಿದ್ದಾರೆ, ಅಮರೇಶ್ವರ ದಲ್ಲಿ ೧೧ ದಿನ ಮೌನ ಅನುಷ್ಠಾನ ಮಾಡಿದ ಸ್ವಾಮೀಜಿ ಮತ್ತೆ ೧೧ ದಿನ ಗಡಗಿಬಾವಿಯಲ್ಲಿ ಕಠಿಣವಾದ ಯೋಗ ಸಮಾದಿ ಮಾಡಿದ್ದಾರೆ, ಯೋಗ ಸಮಾದಿ ಮಾಡುವ ಸ್ವಾಮೀಜಿಗಳಲ್ಲಿ ಈ ಸ್ವಾಮೀಜಿ ಈಗಿನ ಕಾಲದಲ್ಲಿ ಅಪರೂಪದವರಾಗಿದ್ದಾರೆ.

ಮೊದಲಿನಿಂದಲೂ ಇಂಥ ಕಠಿಣ ಯೋಗ ಮಾಡುವ ಅಂತೂರು ಬೆಂತೂರು ಸ್ವಾಮಿಗಳು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೊಮ್ಮನಳ್ಳಿಯವರಾಗಿದ್ದು, ಶಿವಯೋಗ ಮಂದಿರ, ಕಾಶಿ ಹಾಗು ಮೈಸೂರಿನಲ್ಲಿ ಯೋಗ ಆಧ್ಯಾತ್ಮ ಅಧ್ಯಯನ ಮಾಡಿದ ಸ್ವಾಮೀಜಿ ಅಂತೂರು ಬೆಂತೂರಿನ ಮಠಕ್ಕೆ ಸ್ವಾಮೀಜಿಗಳಾದ ನಂತರ ಪವಿತ್ರ ಕ್ಷೇತ್ರದಲ್ಲಿ ಯೋಗ ಸಾಧನೆ ಮಾಡುತ್ತಾ ಸಾಗಿದ್ದಾರೆ. ಈಗ ಅಮರಲಿಂಗ ಹೊಂದಿರುವ ಅಮರೇಶ್ವರ ಕ್ಷೇತ್ರದಲ್ಲಿ ಲೋಕಲ್ಯಾಣಾರ್ಥವಾಗಿ ಸಮಾದಿ ಯೋಗ ಮಾಡಿದ್ದಾರೆ.

ಯೋಗ ಸಮಾದಿ ಮಾಡುವ ವೃತ ಕಠಿಣವಾಗಿರುತ್ತದೆ, ಅಮರೇಶ್ವರ ದಲ್ಲಿರುವ ಗಡಗಿ ಬಾವಿಯ ಆಳದ ಗವಿಯಂಥ ಸ್ಥಳದಲ್ಲಿ ಪೀಠದಲ್ಲಿ ಕುಳಿತ ಸ್ವಾಮೀಜಿ ಗಾಳಿ, ಬೆಳಕು ಆಹಾರ ಇಲ್ಲದೆ ೧೧ ದಿನ ಕಳೆದಿದ್ದಾರೆ, ಇಂದು ಯೋಗ ಮುಗಿಸಿದ ನಂತರ ಎಲ್ಲವೂ ಅನುಷ್ಠಾನ ಸಿದ್ದಿಯಿಂದ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಹಿಂದಿನ ಕಾಲದಲ್ಲಿ ಯೋಗ ಸಮಾದಿ ವೃತದ ಕೇಳುತ್ತಿದ್ದವರಿಗೆ ಈಗ ೧೧ ದಿನಗಳ ಕಾಲ ಸಮಾದಿಯಲ್ಲಿದ್ದು ಯೋಗ ಮಾಡಿದ ಸ್ವಾಮೀಜಿಯನ್ನು ನೋಡುವ ಭಾಗ್ಯ ಭಕ್ತರದ್ದಾಗಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.