ಖ್ಯಾತ ಕ್ರೀಡಾ ಪತ್ರಕರ್ತ ಯೋಗೇಶ್ ಗರುಡ ಇನ್ನಿಲ್ಲ….!

ಗದುಗಿನ ಖ್ಯಾತ ನಾಟಕಕಾರ, ಹಿರಿಯ ಕ್ರೀಡಾ ಪತ್ರಕರ್ತ ಗರುಡ ಸದಾಶಿವರಾಯರ ಮೊಮ್ಮಗ ದಿಗಂಬರ ಯೋಗೇಶ ಗರುಡ ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪತ್ನಿ ಶೋಭಾ ಲೋಕನಾಥ್ ಮತ್ತು ಪುತ್ರಿ ತಪಸ್ಯಾ ಇರುವ ಯೋಗೇಶ ಗರುಡ ಅವರಿಗೆ ಈಗಿನ್ನು 45 ವರ್ಷ ವಯಸ್ಸು. ಇವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪತ್ರಿಕೋದ್ಯಮ ದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು. ಪ್ರಜಾವಾಣಿ ಪತ್ರಿಕೆಯಲ್ಲಿ ಸುಮಾರು 12 ವರ್ಷ ಹಿರಿಯ ಕ್ರೀಡಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ವಿಜಯ ಕರ್ನಾಟಕ ಪತ್ರಿಕೆಯಲ್ಲೂ ಕ್ರೀಡಾ ಸಂಪಾದಕನಾಗಿ ಎರಡು ವರ್ಷ ಕೆಲಸ ಮಾಡಿದ್ದಾರೆ.  ಜೆತೆಗೆ ಸಿಡ್ನಿ ರೇಡಿಯೋ ಗೆ ಅರೆಕಾಲಿಕ ವರದಿಗಾರನಾಗಿದ್ದರು. ಟಿವಿ ವಾಹಿನಿ, ಆಕಾಶವಾಣಿ ಯ ಚರ್ಚಾ ಕಾರ್ಯಕ್ರಮ ಗಳಲ್ಲಿ ಸಕ್ರಿಯ ರಾಗಿದ್ದರು.

ಭರತನಾಟ್ಯ ಮತ್ತು ರಂಗ ಕಲಾವಿದರಾಗಿ ಸಕ್ರೀಯರಾಗಿದ್ದ ಯೋಗೇಶ ಅವರು ಲಿವರ್ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.