ಗಣೇಶ ಸಂಭ್ರಮಕ್ಕೆ ನೆರೆ ಬ್ರೇಕ್ : ಕೃಷ್ಣಾ ನದಿ ಪ್ರವಾಹದಿಂದ ನಲುಗಿದ ಗ್ರಾಮ

ನಾಡನಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ, ಆದರೆ ಕಷ್ಣಾ ನದಿ ಪ್ರವಾಹದಿಂದ ನಲುಗಿದ ಗ್ರಾಮದಲ್ಲಿ ಈ ಬಾರಿ ಗಣೇಶ ಹಬ್ಬದ ಸಂಭ್ರಮವಿಲ್ಲ, ಪ್ರತಿ ಗ್ರಾಮಸ್ಥರು ಹಣ ಕೂಡಿಸಿ ಗಣೇಶ ಹಬ್ಬವನ್ನು ಸಂಭ್ರಮಿಸುತ್ತಿದ್ದರು, ಆದರೆ ಇವರ ಸಂಭ್ರಮಕ್ಕೆ ನೆರೆಯು ಬ್ರೇಕ್ ಹಾಕಿದೆ, ಈಗ ಹಬ್ಬವಿಲ್ಲದೆ ಜನರು ನೆಲೆ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಇದು ರಾಯಚೂರು ತಾಲೂಕಿನ ಗುರ್ಜಾಪುರ ಎಂಬ ಗ್ರಾಮ, ಕಳೆದ ತಿಂಗಳು ಕೃಷ್ಣಾ ನದಿಯಲ್ಲಿಯ ೯.೧೫ ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಕೃಷ್ಣಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿ ನದಿ ಪಾತ್ರದ ಗ್ರಾಮಗಳು ಮುಳುಗಡೆಯಾಗಿದ್ದವು, ಮುಳುಗಡೆಯಾದ ಗ್ರಾಮಗಳಲ್ಲಿ ಗುರ್ಜಾಪುರವು ಒಂದು, ಗುರ್ಜಾಪುರ ಗ್ರಾಮ ಮುಳುಗಡೆಯಾಗಿದ್ದರಿಂದ ಜೆ ಮಲ್ಲಾಪುರ ಗ್ರಾಮದಲ್ಲಿ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು, ಪ್ರವಾಹ ನಂತರ ಈಗ ಗ್ರಾಮಸ್ಥರು ಗ್ರಾಮಕ್ಕೆ ಮರಳಿದ್ದಾರೆ, ಈಗ ನಾಡಿನಲ್ಲೆಡೆ ಗಣೇಶ ಹಬ್ಬದ ಸಂಭ್ರಮದಿಂದ ಆಚರಿಸುತ್ತಿದ್ದರೆ ಈ‌ ಗ್ರಾಮಸ್ಥರಿಗೆ ಹಬ್ಬ ಆಚರಿಸುವ ಉತ್ಸಾಹವಿಲ್ಲ, ನದಿಯ ಒಡಲಿನಲ್ಲಿ ಭೂಮಿ ಕೊಚ್ಚಿಕೊಂಡು ಹೋಗಿದ್ದು ಒಂದು ಕಡೆ, ನದಿಯ ಹೂಳು ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡಿದ್ದ ಬೆಳೆ ನಾಶವಾಗಿದೆ, ಇದರಿಂದ ಗ್ರಾಮದ ರೈತರು ಸಾಲಗಾರರಾಗಿದ್ದಾರೆ, ಸರಕಾರ ಪರಿಹಾರ ನೀಡಿದರೆ ಮಾತ್ರ ಮಾಡಿರುವ ಸಾಲದಲ್ಲಿ ಸ್ವಲ್ಪ ಕಡಿಮೆಯಾಗಬಹುದು, ಎಲ್ಲವನ್ನು ಕಳೆದುಕೊಂಡ ಗ್ರಾಮಸ್ಥರಯ ಗಣೇಶ ಹಬ್ಬ ಆಚರಿಸಲು ಮುಂದಾಗುತ್ತಿಲ್ಲ.

ಒಂದು ನಿರಾಶ್ರಿತರ ಕೇಂದ್ರದಲ್ಲಿ ಗ್ರಾಮಸ್ಥರು ಹದಿನೈದು ದಿನಗಳ ಹಿಂದೆ ಗ್ರಾಮಕ್ಕೆ ಮರಳಿದ್ದರೂ ಗ್ರಾಮದ ಮನೆಗಳಲ್ಲಿ ಬಸಿ ನೀರು ಬರುತ್ತವೆ, ಹಾವು ಚೇಳು ಗಳು ಬರುತ್ತಿವೆ, ರಸ್ತೆಗಳು ನೀರಿನಿಂದ ಮುಳುಗಿವೆ, ಇವುಗಳ ಗ್ರಾಮಸ್ಥರು ಪ್ರತಿ ವರ್ಷ ಗೌರಿ ಗಣೇಶ ಹಬ್ಬ ಆಚರಿಸುತ್ತಿದ್ದವರು ಈಗ ಇಷ್ಟೆಲ್ಲ ಸಂಕಷ್ಟ ಇರುವಾಗ ಹಬ್ಬ ಹೇಗೆ ಆಚರಿಸುವುದು, ಗ್ರಾಮಸ್ಥರು ಹಣ ಕೂಡಿಸಿ ಸಂಕಷ್ಟ ಹರ ಪ್ರತಿಷ್ಠಾಪಿಸುತ್ತಿದ್ದರು, ಆದರೆ ಈ ಬಾರಿ ಅವರೆ ಸಂಕಷ್ಟದಲ್ಲಿದ್ದೇವೆ ನಾವು ಹೇಗೆ ಗಣೇಶ ಆಚರಿಸಬೇಕು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

ಇದು ಗುರ್ಜಾಪುರ ದ ದೃಶ್ಯವಷ್ಟೆ ಅಲ್ಲಿ ನೆರೆ ಪೀಡಿತ ಗ್ರಾಮಗಳಲ್ಲಿ ಇದೇ ಸ್ಥಿತಿ ಇದೆ, ಸಂಕಷ್ಟ ಹರ ವಿಘ್ನೇಶ ಇವರ ಸಂಕಷ್ಟ ನಿವಾರಣೆ ಮಾಡಲಿ ಎಂದು ಜನತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.